ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ, ಬಾಲಕಿಯರ ಮೇಲುಗೈ

ದಾವಣಗೆರೆ, ಜು. 10 – 2024ರಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ-2 ರ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಶೇ.29.73 ಗಂಡು, ಶೇ.44.08 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ. ಕೊಟ್ರೇಶ್ ತಿಳಿಸಿದ್ದಾರೆ. 

ತಾಲ್ಲೂಕುವಾರು ವಿವರದನ್ವಯ :  ಚನ್ನಗಿರಿ ತಾಲ್ಲೂಕಿನಲ್ಲಿ ಒಟ್ಟು 1135 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 234 ಗಂಡು, 217 ಹೆಣ್ಣು ಮಕ್ಕಳು ಉತ್ತೀರ್ಣರಾಗಿರುತ್ತಾರೆ. ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 577 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 115 ಗಂಡು, 97 ಹೆಣ್ಣು ಮಕ್ಕಳು ಉತ್ತೀರ್ಣ, ಜಗಳೂರು ಒಟ್ಟು 729 ವಿದ್ಯಾರ್ಥಿಗಳು ಪರೀಕ್ಷೆ ಬರೆದು 145 ಗಂಡು, 122 ಹೆಣ್ಣು ಮಕ್ಕಳು, ದಾವಣಗೆರೆ ಉತ್ತರ ಒಟ್ಟು 808 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 172 ಗಂಡು, 113 ಹೆಣ್ಣು ಮಕ್ಕಳು ಉತ್ತೀರ್ಣರಾಗಿರುತ್ತಾರೆ. ದಾವಣಗೆರೆ ದಕ್ಷಿಣ ಒಟ್ಟು 1008 ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಇದರಲ್ಲಿ 193 ಗಂಡು, 156 ಹೆಣ್ಣು ಮಕ್ಕಳು ಉತ್ತೀರ್ಣ, ಹರಿಹರ ಒಟ್ಟು 1114 ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಇದರಲ್ಲಿ 170 ಗಂಡು ಹಾಗೂ  137 ಹೆಣ್ಣು ಮಕ್ಕಳು ಉತ್ತೀರ್ಣರಾಗಿರುತ್ತಾರೆ.

error: Content is protected !!