ದಾವಣಗೆರೆ, ಜು. 9- ನಗರದ ಕುಂದುವಾಡ ರಸ್ತೆಯ ಸಪ್ತಗಿರಿ ವಿದ್ಯಾಲಯ ಹಾಗೂ ಧಾರವಾಡದ ಗೋಲ್ಡನ್ ಕರಾಟೆ ಕ್ರೀಡಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ 13 ರಿಂದ 15 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಈಚೆಗೆ ಏರ್ಪಡಿಸಿದ್ದ ಎರಡನೇ ರಾಷ್ಟ್ರೀಯ ಮಟ್ಟದ ಇನ್ವಿಟೇಷನಲ್ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ ಸಪ್ತಗಿರಿ ಶಾಲೆಯ ಜಿ.ಎಸ್.ಚಾರಿತ್ರಿಯ, ಕೆ.ಎನ್. ವೇದ, ಸಾನ್ವಿ ಎಂ. ಕುಮಾರ್ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ಈ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ, ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.