ಸುಂಕದಕಟ್ಟೆಯ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಕಳಕಳಿ
ಹೊನ್ನಾಳಿ, ಜು. 7 – 2013ರಲ್ಲಿ ಶಾಸಕನಾಗಿದ್ದ ಅವಧಿಯಲ್ಲಿ ಪೋಷಕರ ಒತ್ತಾ ಯದ ಮೇರೆಗೆ ಸುಂಕದಕಟ್ಟೆ ಗ್ರಾಮದಲ್ಲಿ 6.5 ಕೋಟಿ ರೂ. ವೆಚ್ಚದಲ್ಲಿ ಡಿಪ್ಲೋಮಾ ಕಾಲೇಜ್ ಪ್ರಾರಂಭ ಮಾಡಲಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದ ಹತ್ತಿರವಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮ, ತೃತೀಯ ವರ್ಷದ ವಿದ್ಯಾರ್ಥಿ ಗಳಿಗೆ ಬೀಳ್ಕೊಡುಗೆ ಮತ್ತು ವಿದ್ಯಾರ್ಥಿ ಸಂಘ, ಎನ್.ಎಸ್.ಎಸ್. ಹಾಗೂ ರೆಡ್ ಕ್ರಾಸ್ ಘಟಕಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
5 ಎಕರೆ ಜಾಗವನ್ನು ಕಾಯ್ದಿರಿಸಿದರೆ ಮಾತ್ರವೇ ಡಿಪ್ಲೋಮಾ ಕಾಲೇಜಿಗೆ ಅನುಮತಿ ನೀಡುವುದಾಗಿ ಸರ್ಕಾರ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಸುಂಕದಕಟ್ಟೆ ಗ್ರಾಮದವರು 5 ಎಕರೆ ಜಾಗ ನೀಡಲು ಸಮ್ಮತಿ ನೀಡಿದ್ದಕ್ಕಾಗಿ ಗ್ರಾಮಸ್ಥರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಪೋಷಕರು ಇತ್ತೀಚೆಗೆ ತಮಗೆ ಎಂತಹ ಕಷ್ಟ ಇದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಒತ್ತು ನೀಡುತ್ತಿದ್ದು, ಪೋಷಕರಿಗೆ ವಂಚನೆ ಮಾಡದೇ ಕಲಿತು ಪೋಷಕರ ಋಣ ತೀರಿಸುವುದರ ಜೊತೆಗೆ ಕಾಲೇಜಿಗೆ ಕೀರ್ತಿ ತರುವಂತಾಗಬೇಕೆಂದು ಶಾಸಕರು ಸಲಹೆ ನೀಡಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕು ಗಳಿಂದ ಸುಮಾರು 25,000ಕ್ಕೂ ಹೆಚ್ಚು ಜನರು ಬೆಂಗಳೂರಿನಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದು, ಬಿಎ, ಬಿಕಾಂ, ಬಿಎಸ್ಸಿ ಕೋರ್ಸ್ಗಳಿಗಿಂತ ಐಟಿಐ, ಡಿಪ್ಲೋಮಾ ಕೋರ್ಸ್ ಮುಗಿಸಿದವರಿಗೆ ದೇಶ-ವಿದೇಶ ಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದ್ದು ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಕಲಿ ಯಲು ಮುಂದಾಗುವಂತೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಶಾಂತಕುಮಾರ್ ನಾಯ್ಕ್ ಮಾತನಾಡಿ, ಕಾಲೇಜಿನಲ್ಲಿ ಆಟೋಮೊಬೈಲ್ ಮತ್ತು ಆಲ್ಟರ್ನೇಟ್ ಎನರ್ಜಿ ಟೆಕ್ನಾಲಜಿ ವಿಭಾಗದಲ್ಲಿ ಡಿಪ್ಲೋಮಾ ಪೂರೈಸಿದ ವಿದ್ಯಾರ್ಥಿಗಳಿಗೆ ಕೆಲವು ಒಳ್ಳೆಯ ಕಂಪೆನಿಗಳು ನೌಕರಿ ಜೊತೆಗೆ ಉತ್ತಮ ಸಂಬಳ ನೀಡುತ್ತಿವೆ ಎಂದು ತಿಳಿಸಲು ಹರ್ಷವಾಗುತ್ತದೆ ಎಂದರು.
ಕನ್ನಡ ಮತ್ತು ಇಂಗ್ಲೀಷ್ 2 ಭಾಷೆ ಗಳಲ್ಲೂ ಪರೀಕ್ಷೆ ಬರೆಯಲು ಅವಕಾಶವಿದ್ದು, ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಸೇರಲು 15% ಮೀಸಲಾತಿಯಿದ್ದು, ವಿದ್ಯಾರ್ಥಿಗಳು ಸದುಪ ಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು.
ಅರಬಗಟ್ಟೆ ಗ್ರಾ.ಪಂ. ಅಧ್ಯಕ್ಷ ಡಿ.ಬಿ. ಶ್ರೀನಾಥ್ ಪಂಚಾಯ್ತಿ ವತಿಯಿಂದ ಕಾಲೇಜಿನ ಅಭಿವೃದ್ಧಿಗೆ ಅವಶ್ಯವಿರುವ ಬೇಡಿಕೆಗಳನ್ನು ಈಡೇರಿಸಲು ಬದ್ಧ ಎಂದು ಭರವಸೆ ನೀಡಿದರು.
ಸದಸ್ಯ ಮಂಜುನಾಥ್ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕೋರ್ಸ್ಗಳಿಗೆ ಬೇಡಿಕೆ ಹೆಚ್ಚಿದ್ದು ಈ ಕೋರ್ಸ್ಗಳನ್ನು ತೆರೆಯಲು ಅಗತ್ಯ ಕ್ರಮ ಜರುಗಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಸಮಾರಂಭದಲ್ಲಿ ಟಿ.ಎಲ್. ಮಹಾಲಿಂಗಪ್ಪ, ಟಾಕಪ್ಪ ಚವ್ಹಾಣ್ ಆಲ್ಟರ್ನೇಟ್ ಎನರ್ಜಿ ಟೆಕ್ನಾಲಜಿ ಮತ್ತು ಆಟೋಮೊಬೈಲ್ ಕೋರ್ಸ್ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು.
ಸಮಾರಂಭದಲ್ಲಿ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಸುರೇಶ್ ಕುಮಾರ್, ಉಪನ್ಯಾಸಕ ಎಚ್. ದೊಡ್ಡಸ್ವಾಮಿ, ಪ್ರಕಾಶ್ ಕುಂಬಾರ್, ಜಿ.ಆರ್.ಮಾಲತಿ, ಡಾ. ಓಂಕಾರ್ ನಾಯ್ಕ್, ಅಧೀಕ್ಷಕ ಸಿ. ರವಿಕುಮಾರ್, ಎಫ್.ಡಿ.ಎ. ಚೇತನ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.