ಹರಿಹರ, ಜು. 5- ನಗರಕ್ಕೆ ಕರ್ನಾಟಕ ಸಂಭ್ರಮ 50 ರ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುವ ಜ್ಯೋತಿ ರಥಯಾತ್ರೆ ರಾಣೇಬೆನ್ನೂರು ತಾಲ್ಲೂಕಿನಿಂದ ಹರಿಹರ ತಾಲ್ಲೂಕಿಗೆ ಆಗಮಿಸಿದಾಗ, ತಹಶೀಲ್ದಾರ್ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆಯನ್ನು ಅರ್ಪಿಸಿ, ಹೂವಿನ ಹಾರವನ್ನು ಹಾಕುವುದರ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ, ಜ್ಯೋತಿ ರಥಯಾತ್ರೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಜ್ಯೋತಿ ರಥಯಾತ್ರೆ ಮೆರವಣಿಗೆಯು ಡೊಳ್ಳು ಕುಣಿತ, ಗೊಂಬೆ ಕುಣಿತ, ವಿವಿಧ ಶಾಲಾ ಮಕ್ಕಳ ಡ್ರಮ್ ಸೆಟ್ ವಾದ್ಯಗಳೊಂದಿಗೆ ತುಂಗಭದ್ರಾ ನದಿಯ ಆವರಣ ದಿಂದ ಪ್ರಾರಂಭಗೊಂಡು ಹಳೇ ಪಿ.ಬಿ. ರಸ್ತೆ, ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ಮೂಲಕ ಸಂಚರಿಸಿ, ನಂತರ ಬೈಪಾಸ್ ಮೂಲಕ ದಾವಣಗೆರೆ ಆನಗೋಡಿನಿಂದ ಜಗಳೂರು ತಾಲ್ಲೂಕಿಗೆ ಬೀಳ್ಕೊಡಲಾಯಿತು.
ಜ್ಯೋತಿ ರಥಯಾತ್ರೆ ಸ್ವಾಗತಿಸಿದ ತಹಶೀಲ್ದಾರ್ ಗುರುಬಸವರಾಜ್ ಮಾತನಾಡಿ, ಕನ್ನಡಿಗರ ಮನಸ್ಸನ್ನು ಬೆಸೆಯುವ ದೃಷ್ಟಿಯಿಂದ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ ನಾಡಿನಾದ್ಯಂತ ಸಂಚರಿಸುವ ಮೂಲಕ ರಾಜ್ಯದಾದ್ಯಂತ ಇರುವಂತಹ ಕನ್ನಡಿಗರಿಗೆ ನಾಡು, ನುಡಿ, ಜಲ, ಭಾಷೆ, ಸಾಹಿತ್ಯ ಬಗ್ಗೆ ಹೆಚ್ಚು ಅಭಿಮಾನ ಮಾಡಲಿಕ್ಕೆ ಸಹಕಾರಿಯಾಗಲಿದೆ. ಜೊತೆಗೆ ಕನ್ನಡದ ಇತಿಹಾಸವನ್ನು ಕುರಿತು ವಿದ್ಯಾರ್ಥಿಗಳು ಮತ್ತು ನಾಡಿನ ಜನರು ತಿಳಿದುಕೊಳ್ಳಲು ಆಸಕ್ತಿ ಹೆಚ್ಚು ಆಗುವುದಕ್ಕೆ ಇನ್ನಷ್ಟು ಸ್ಫೂರ್ತಿ ನೀಡಿದಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಐಗೂರು, ತಾ.ಪಂ ಇಓ ರಾಮಕೃಷ್ಣಪ್ಪ, ಸಿಪಿಐ ದೇವಾನಂದ್, ಗ್ರೇಡ್ 2 ತಹಶೀಲ್ದಾರ್ ಶಶಿಧರಯ್ಯ, ಸಿಡಿಪಿಓ ಪೂರ್ಣಿಮಾ, ಲೋಕೋಪಯೋಗಿ ಇಲಾಖೆಯ ಶಿವಮೂರ್ತಿ, ತೋಟಗಾರಿಕೆ ಇಲಾಖೆ ಶಶಿಧರ್, ಆರೋಗ್ಯ ಇಲಾಖೆಯ ಅಬ್ದುಲ್ ಖಾದರ್, ಎಂ. ಉಮ್ಮಣ್ಣ, ನಗರಸಭೆ ನಾಮನಿರ್ದೇಶನ ಸದಸ್ಯರಾದ ಕೆ.ಬಿ.ರಾಜಶೇಖರ, ಸಂತೋಷ್ ದೊಡ್ಡಮನೆ, ಟಿ.ಜೆ. ಮುರುಗೇಶಪ್ಪ, ಕಸಾಪ ಗೌರವ ಕಾರ್ಯದರ್ಶಿ ಎಂ.ಚಿದಾನಂದ ಕಂಚಿಕೇರಿ, ಕದಂಬ ರಕ್ಷಣಾ ವೇದಿಕೆಯ ಹೆಚ್.ಸುಧಾಕರ, ತಾಲ್ಲೂಕು ಆಡಳಿತದ ಸಂತೋಷ್, ಮಂಜುನಾಥ್, ಸಮೀರ್, ಶಿವಕುಮಾರ್, ಸೋಮಶೇಖರ್, ಉಮೇಶ್, ಸಿಡಿಪಿಓ ಇಲಾಖೆಯ ಲಕ್ಷ್ಮೀ, ಮಂಜುಳಾ, ಶೈಲಾ ಮೈದೂರು, ಗೀತಾ ಕೊಂಡಜ್ಜಿ, ಬೆಸ್ಕಾಂ ಮಹಾವೀರ್, ನಗರಸಭೆ ಆರೋಗ್ಯ ಇಲಾಖೆಯ ರವಿಪ್ರಕಾಶ್, ಸಂತೋಷ್ ನಾಯ್ಕ್, ನೀಲಪ್ಪ, ಶಿಕ್ಷಕ ಹೊನ್ನಪ್ಪ ಅಮರಾವತಿ, ಪೊಲೀಸ್ ಸತೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡಪರ ಸಂಘಟನೆಯವರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇತರರು ಹಾಜರಿದ್ದರು.