ನಗರದಲ್ಲಿ ಇಂದು ಡಾ. ವಿಶ್ವನಾಥ್ ಅವರ ಪುಸ್ತಕ ಬಿಡುಗಡೆ

ಹೆಚ್.ಆಂಜನೇಯ ಅಭಿಮಾನಿಗಳು ಹಾಗೂ ಡಾ.ಹೆಚ್. ವಿಶ್ವನಾಥ್ ಅಭಿಮಾನಿಗಳಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲ ಸಚಿವರೂ, ಚಿಂತಕರೂ ಆದ ಡಾ. ಹೆಚ್. ವಿಶ್ವನಾಥ್ ಅವರ ಹುಟ್ಟು ಹಬ್ಬ ಕಾರ್ಯಕ್ರಮವನ್ನು ಇಂದು ಸಂಜೆ 6.30ಕ್ಕೆ ಆರ್.ಹೆಚ್. ಧರ್ಮಶಾಲೆಯಲ್ಲಿ ಏರ್ಪಡಿಸಲಾಗಿದೆ.

ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ಡಾ. ವಿಶ್ವನಾಥ್ ಬರೆದಿರುವ `ನವಭಾರತ ನಿರ್ಮಾಪಕ ಡಾ. ಬಾಬು ಜಗಜೀವನ ರಾಮ್’ ಹಾಗೂ `ಸಾಹಿತ್ಯಾ ನುಭವ’ ಕೃತಿಗಳು ಲೋಕಾರ್ಪಣೆಯಾಗಲಿವೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅವರ ಅಧ್ಯಕ್ಷತೆ ವಹಿಸಲಿದ್ದು, ಕೈಗಾರಿಕೋದ್ಯಮಿ ಎಸ್.ಎಸ್.ಗಣೇಶ್ , ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ , ಮಾಜಿ ನಗರಾಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ, ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮೊದಲಾದವರು ಪಾಲ್ಗೊಳ್ಳುವರು.

ಈ ಮೊದಲು ಬೆಳಗ್ಗೆ 11ಕ್ಕೆ ಚಿತ್ರದುರ್ಗದ ಸ್ನಾತಕೋತ್ತರ ಕೇಂದ್ರದ ಕಾರ್ಯಕ್ರಮದಲ್ಲಿ ಡಾ. ವಿಶ್ವನಾಥ್ ರೊಂದಿಗೆ ಬರಗೂರು ರಾಮಚಂದ್ರಪ್ಪ ಮತ್ತಿತ್ತರೆ  ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಭರಮಸಾಗರದ ಬಿ.ಟಿ. ನಿರಂಜನ ಮೂರ್ತಿ ಕಲ್ಯಾಣ ಮಂಟಪದಲ್ಲಿ ಸಾಣೇಹಳ್ಳಿ ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ನಡೆಯುವ ವಿಶ್ವನಾಥ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ವಿಶ್ವನಾಥ್ ವಿರಚಿತ ಕೃತಿ ಲೋಕಾರ್ಪಣೆಯಾಗಲಿದೆ ಎಂದು ಸಂಚಾಲಕ  ಜೆ. ಈಶ್ವರ ಸಿಂಗ್  ಕವಿತಾಳ ತಿಳಿಸಿದ್ದಾರೆ.

error: Content is protected !!