ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಗುರಿ ಮುಖ್ಯ

ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಗುರಿ ಮುಖ್ಯ

ರಾಣೇಬೆನ್ನೂರು ಎಸ್‌ಟಿಜೆ ಕಾಲೇಜ್ ಪ್ರಾಧ್ಯಾಪಕ ಡಾ. ಎಂ. ಇ. ಶಿವಕುಮಾರ್‌ 

ದಾವಣಗೆರೆ, ಜು. 5-  ಓದುವ ಸಮಯದಲ್ಲಿ ತುಂಬಾ ಶ್ರದ್ದೆಯಿಂದ ಓದಿ ತಮ್ಮ ಗುರಿ ಮುಟ್ಟುವ ದಿಕ್ಕಿನಲ್ಲಿ  ವಿದ್ಯಾರ್ಥಿಗಳು ಸಾಗಬೇಕು ಎಂದು  ರಾಣೇಬೆನ್ನೂರಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ. ಇ. ಶಿವಕುಮಾರ್‌ ಹೊನ್ನಾಳಿ ಕಿವಿಮಾತು ಹೇಳಿದರು. 

ನಗರದ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಓರಿಯಂಟೇಷನ್ ಪ್ರೋಗ್ರಾಂನಲ್ಲಿ    `ವ್ಯಕ್ತಿತ್ವ ಅಭಿವೃದ್ಧಿ, ಆತ್ಮ ಶಕ್ತಿ ಮತ್ತು ಆತ್ಮ ವಿಶ್ವಾಸ’   ಕುರಿತು ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ ಮತ್ತು ಗುರಿ ಬಹಳ ಮುಖ್ಯ,  ಇದರ ಫಲ ಕೊನೆಗೆ ನಿಮಗೆ ಸಿಗುವ ನೆಮ್ಮದಿ.  ಸಿದ್ಧಾಂತ, ತಂತ್ರ, ವಿದ್ಯೆ ಮತ್ತು ಕೌಶಲ್ಯ ತತ್ವಗಳನ್ನು ಬಳಸಿಕೊಳ್ಳುವ, ಯೋಜನೆಗಳ ಯಶಸ್ಸಿಗೆ ಬೇಕಾದ ಉತ್ತಮ ನಿರ್ವಹಣೆಯ ಅರಿವು ಪ್ರತಿಯೊಬ್ಬರಿಗೂ ಇರಬೇಕು.     ಶಿಕ್ಷಣದಲ್ಲಿ ಪಡೆದದ್ದನ್ನು ಪರೀಕ್ಷೆಯಲ್ಲಿ ಬರೆದು, ಅದನ್ನು ಹಾಗೆ ಮರೆಯದೇ   ಜ್ಞಾನವಾಗಿ ಪರಿವರ್ತಿಸಿ ಕೊಂಡಲ್ಲಿ ಮಾತ್ರ ಜೀವನ ಪರೀಕ್ಷೆಯಲ್ಲೂ ಯಶಸ್ಸು ಸಾಧಿಸಲು  ಸಾಧ್ಯ ಎಂದರು.       

 ವೇದಿಕೆಯಲ್ಲಿ ಪ್ರೊ. ಬಿ.ಪಿ.ಬಸವರಾಜ್, ಪ್ರೊ.ಎನ್.ಸುಜಾತ ಉಪಸ್ಥಿತರಿದ್ದರು. ಡಾ.ಎಂ.ಜಿ.ಸುರೇಶ್ ಸ್ವಾಗತಿಸಿದರು.  ಕಾರ್ಯಕ್ರಮದ ಸಂಯೋಜಕ  ಪ್ರೊ. ಯು. ಶರತ್ ಕುಮಾರ್ ವಂದಿಸಿದರು.

error: Content is protected !!