ಜಗಳೂರಿನಲ್ಲಿ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

ಜಗಳೂರಿನಲ್ಲಿ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

ಜಗಳೂರು, ಜು. 5 – ಕರ್ನಾಟಕ ನಾಮಕರಣಗೊಂಡು 50 ವರ್ಷ ಪೂರೈಸಿದ ನಿಮಿತ್ತ ಹಮ್ಮಿಕೊಂಡಿರುವ   ಕರ್ನಾಟಕ ಸಂಭ್ರಮ 50 ರ ಜ್ಯೋತಿ ರಥಯಾತ್ರೆಗೆ ತಾಲ್ಲೂಕು ಆಡಳಿತದಿಂದ. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಮಹಾತ್ಮಗಾಂಧಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಾದ್ಯವೃಂದ, ಕಲಾತಂಡಗಳ ನೇತೃತ್ವ ದಲ್ಲಿ  ಸಂಚರಿಸಿ ಜಾಗೃತಿ ಮೂಡಿಸಲಾಯಿತು.

ಕರ್ನಾಟಕ ನಾಮಕರಣಗೊಂಡು 50ನೇ ವರ್ಷದ ಸಂಭ್ರಮ ರಾಜ್ಯದ ಐತಿಹಾಸಿಕ ಸ್ಥಳ ಹಂಪಿಯಿಂದ ಆರಂಭವಾಗಿದ್ದು. ಕೈಗೊಂಡಿರುವ ಜ್ಯೋತಿ ರಥಯಾತ್ರೆಗೆ ಪ್ರತಿಯೊಬ್ಬ ಕನ್ನಡಿಗರು ಗೌರವಿಸಿ ನಾಡು-ನುಡಿ ಅಭಿಮಾನ ಮೆರೆಯ ಬೇಕಿದೆ. ಕರ್ನಾಟಕದ ಇತಿಹಾಸ ಮುಂದಿನ ಪೀಳಿಗೆಗೆ ಪಸರಿಸಬೇಕಿದೆ ಎಂದು  ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ತಿಳಿಸಿದರು.

ಬಿಇಓ ಹಾಲಮೂರ್ತಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ ಸಂಸ್ಕೃತಿ, ಪ್ರಾಕೃತಿಕ ಸೊಬಗು ದೇಶಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿ ಯುವ ಸಮೂಹ ಕನ್ನಡ ಭಾಷೆ ಉಳಿವಿಗಾಗಿ ಸಂಕಲ್ಪ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗ್ರೇಡ್ -2 ಮಂಜಾನಂದ, ತಾ.ಪಂ.ಇಓ ಕರಿಬಸಪ್ಪ, ಸಿಡಿಪಿಓ ಬೀರೇಂದ್ರಕುಮಾರ್, ಪ. ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಎಇಇಗಳಾದ  ನಾಗರಾಜ್, ಶಿವಮೂರ್ತಿ, ಸುರೇಶ್ ರೆಡ್ಡಿ, ಧನಂಜಯ್, ಕಸಾಪ ತಾಲ್ಲೂಕು ಅಧ್ಯಕ್ಷೆ ಸುಜಾತಮ್ಮ, ಪದಾಧಿಕಾರಿಗಳಾದ ಓಬಣ್ಣ, ಬಡಪ್ಪ, ಗೀತಾ ಮಂಜು, ಪತ್ರಕರ್ತರಾದ  ರಾಜಪ್ಪ,  ಎಂ. ಎಚ್.ಆರ್. ಬಸವರಾಜ್, ಮಾರಪ್ಪ, ಮಾದಿಹಾಳ್‌ ಮಂಜುನಾಥ್ ಮುಂತಾದವರು ಇದ್ದರು.

error: Content is protected !!