ಮಾದಕ ದ್ರವ್ಯ ಸೇವನೆ ದೇಶದ ಅತಿ ದೊಡ್ಡ ಪಿಡುಗು

ಮಾದಕ ದ್ರವ್ಯ ಸೇವನೆ ದೇಶದ ಅತಿ ದೊಡ್ಡ ಪಿಡುಗು

ಹರಪನಹಳ್ಳಿಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಎಚ್.ಬಿ.ಮಂಜುನಾಥ್  

ಹರಪನಹಳ್ಳಿ, ಜು. 3- ಮಾದಕ ದ್ರವ್ಯ ಸೇವನೆ ನಮ್ಮ ದೇಶದ ಅತೀ ದೊಡ್ಡ ಪಿಡುಗು. ಈ ಪಿಡುಗನ್ನು ತಳ ಮಟ್ಟದಿಂದ ತೊಡೆದು ಹಾಕುವ ಪ್ರಯತ್ನ ನಡೆಯಬೇಕು ಎಂದು ದಾವಣಗೆರೆಯ ವ್ಯಂಗ್ಯ ಚಿತ್ರಕಾರ  ಎಚ್.ಬಿ.ಮಂಜುನಾಥ್  ಹೇಳಿದರು.

ಇಲ್ಲಿನ ಪಟ್ಟಣದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ  ಯೋಜನೆ ಟ್ರಸ್ಟ್ ಹರಪನಹಳ್ಳಿ ವಲಯ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತ ಆಶ್ರಯ ದಲ್ಲಿ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಯುವಕರ ದೇಶ. ಅನ್ಯರೂ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಷ್ಟು ಯುವ ಸಮೂಹ ನಮ್ಮಲ್ಲಿದೆ. ದೇಶದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಯುವಕರೇ ತುಂಬಿದ್ದಾರೆ.   ಅದರೆ ಮಾದಕ ವ್ಯಸನಕ್ಕೆ ಸಿಲುಕಿ ಶೇ. ಐವತ್ತಕ್ಕೂ ಹೆಚ್ಚು ಯುವಕರೇ ಬಲಿಯಾಗುತ್ತಿರುವುದು ದುರ್ದೈವದ ಸಂಗತಿ ಎಂದರು. 

ಸಂಪೂನ್ಮಲ ವ್ಯಕ್ತಿ ಕುಸುಮ ಜಗದೀಶ ಮಾತನಾಡಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ, ಅದರಿಂದ ಹೊರಬರುವುದು ತುಂಬಾ ಕಷ್ಟ ಎಂಬುದನ್ನು ತಿಳಿಹೇಳಬೇಕಿದೆ.  ಚಿಕ್ಕಂದಿನಲ್ಲೇ ಗುರು–ಹಿರಿಯರು ಮಾರ್ಗದರ್ಶನ ನೀಡಬೇಕಿದೆ ಎಂದರು.  

ಮಾನವ ವ್ಯವಸ್ಥೆಯೊಂದು ಅದ್ಭುತವಾದ ರಾಸಾಯನಿಕ ಕಾರ್ಖಾನೆ. ನಿಮಗೆ ನಶೆ ಬೇಕಿದ್ದರೆ, ಒಳಗಿನಿಂದಲೇ ಅದನ್ನು ಸೃಷ್ಟಿಸಬಹುದು. ನಿಮಗೆ ಅಮಲು ಹಾಗೂ ಪೂರ್ತಿ ಜಾಗೃತಿ, ಇವೆರಡೂ ಒಂದೇ ಸಮಯದಲ್ಲಿ ಇರುವಂತಹ ನಶೆ. ಈ ರೀತಿಯಾದ ನಶೆಯನ್ನು ನಮ್ಮ ಮಕ್ಕಳಿಗೆ ಮತ್ತು ಯುವಜನರಿಗೆ ಪರಿಚಯಿಸಬೇಕು. ಇದಕ್ಕಾಗಿಯೇ ಎಲ್ಲರ ಜೀವನದಲ್ಲೂ ಯೋಗ ತಂತ್ರಜ್ಞಾನವನ್ನು ತರುವುದಕ್ಕೆ ನಾವು ಪ್ರಯತ್ನಿಸುತ್ತಿರುವುದು. ನಿಮ್ಮೊಳಗೆ ನೀವು ಕೆಲವು ಸ್ಥಿತಿಗಳನ್ನು ಹೊಂದಿದಾಗ ಯಾವ ತರಹದ ನಶೆ ಸಿಗುತ್ತದೆಂದರೆ, ಅದು ಯಾವುದೇ ಡ್ರಗ್ಸ್ ಅಥವಾ ಡ್ರಿಂಕ್ಸ್‌ನಲ್ಲೂ ಸಿಗುವುದಿಲ್ಲ. ಹಾಗಿದ್ದರೂ, ಅದೇ ಸಮಯದಲ್ಲಿ, ನೀವು ಸಂಪೂರ್ಣವಾಗಿ ಜಾಗೃತರಾಗಿ ರುತ್ತೀರಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ. ಎಸ್. ಷಣ್ಮುಖನ ಗೌಡ  ಮಾತನಾಡಿ, ಮಾದಕ ದ್ರವ್ಯ ಇಡೀ ಸಮಾಜವನ್ನೇ ಹಾಳು ಮಾಡುತ್ತಿದೆ.  ಮಕ್ಕಳು ಮಾದಕ ದ್ರವ್ಯ ಸೇವನೆಯಿಂದ ದೂರ ವಿರುವಂತೆ ಕಾಳಜಿ ವಹಿಸಬೇಕು.

ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆಯಿಂದ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದರು.

ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನಾಧಿ ಕಾರಿ ಬಾಬು,  ಮೇಲ್ವಿಚಾರಕರಾದ  ಅರ್ಪಿತ, ಧರ್ಮಸ್ಥಳ ಸಂಸ್ಥೆಯ  ವಿಜಯಲಕ್ಷ್ಮಿ, ರೂಪ, ಜ್ಯೋತಿ, ಉಪ ನ್ಯಾಸಕ ಎನ್.ಎಂ.ನಾಗರಾಜ, ಉಚ್ಚರಾಯಪ್ಪ, ಶಂಭುಲಿಂಗಪ್ಪ ಕಾಯಕದ, ಪುನೀತರಾಜ್ ಸೇರಿದಂತೆ ಇತರರು ಇದ್ದರು.

error: Content is protected !!