ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಲಿ

ದಾವಣಗೆರೆ, ಜು.3- ಮನ್ ಕೀ ಬಾತ್ ಅಂದರೆ ಮಾನದಾಳದ ಮಾತು. ದೇಶದ ಜನರ ಹೃದಯಕ್ಕೆ ಹತ್ತಿರವಾದ ಪ್ರಚಲಿತ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಬೇಕು. ಅದು ಬಿಟ್ಟು ಕೆಲಸಕ್ಕೆ ಬಾರದ ವಿಚಾರಗಳನ್ನು ಮನ್ ಕೀ ಬಾತ್ ನಲ್ಲಿ ಪ್ರಸ್ತಾಪ ಮಾಡುವುದು ಸರಿಯಲ್ಲವೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಮೋದಿಯವರನ್ನು ತೀವ್ರವಾಗಿ ಟೀಕಿಸಿದ್ದಾರೆ.

ಸಮಾಜದ ಮೇಲೆ ಬೆಳುಕು ಚಲ್ಲುವಂತಹ ವಿಚಾರಗಳನ್ನು ಮಾತನಾಡುವುದನ್ನು ಮೋದಿ ಕಲಿಯಬೇಕು ಎಂದು ಅವರು ಮೋದಿಯ ಮನ್ ಕೀ ಬಾತ್ ಅನ್ನು ಖಂಡಿಸಿದ್ದಾರೆ. 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಸ್ನಾತಕೋತ್ತರ ನೀಟ್ ಸೋರಿಕೆ ಬಗ್ಗೆ, ತಮ್ಮ ಸರ್ಕಾರದ ವ್ಯೆಫಲ್ಯದ ಬಗ್ಗೆ ಮಾತನಾಡಲಿ ಎಂದಿದ್ದಾರೆ.  

ಮೋದಿ ನಿರ್ಮಿತ ದೆಹಲಿ, ಗುಜರಾತ್ ಹಾಗೂ ಯುಪಿ ವಿಮಾನ ನಿಲ್ದಾಣಗಳ ಮೇಲ್ ಚಾವಣಿ  ಕುಸಿತದ ಬಗ್ಗೆ ಮೋದಿ ಉತ್ತರಿಸಲಿ.  ಅಯೋಧ್ಯೆಯ ರಾಮಪಥದ 10 ರಸ್ತೆಗಳನ್ನು 850 ಕೋಟಿ ಗಳ ಮೊತ್ತದಲ್ಲಿ ನಿರ್ಮಾಣದ  ಕುಸಿತದ ಬಗ್ಗೆ ಮಾತಾಡಲಿ. ಆದರ್ಶ ಪುರುಷ ಶ್ರೀ ರಾಮನ ಗರ್ಭಗುಡಿ ಸೋರಿಕೆಯ ಬಗ್ಗೆ ಯಾಕೆ ಮೋದಿ ಮನ್ ಕೀ ಬಾತ್ ನಲ್ಲಿ ಮಾತನಾಡಲ್ಲ. ಮೋದಿ ತೋರಿಕೆಗಾಗಿ ತರಾತುರಿಯಲ್ಲಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಿ ನಿರ್ಮಿಸಿದ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆ. ಅವರ ಆಡಳಿತವು ಕಳಪೆ ಆಗಿದೆ ಎಂದು ಬಸವರಾಜ್ ಕಿಡಿಕಾರಿದ್ದಾರೆ.

error: Content is protected !!