ದಾವಣಗೆರೆ, ಜು. 3- ರೋಟರಿ ಮತ್ತು ಇನ್ನರ್‌ವ್ಹೀಲ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ವೈದ್ಯರ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಡಾ. ಅವಿನಾಶ್, ಡಾ. ವಿಂಧ್ಯಾ ಗಂಗಾಧರ ವರ್ಮ, ಗಂಗಾಧರ ವರ್ಮ, ಶ್ರೀಮತಿ ರಾಮರಾಜು ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ಎರಡೂ ಸಂಸ್ಥೆಯ ಅಧ್ಯಕ್ಷರಾದ ಮುನುವಳ್ಳಿ, ಪ್ರೇಮ ಮಹೇಶ್ವರಪ್ಪ ಹಾಗೂ ಕಾರ್ಯದರ್ಶಿಗಳಾದ ಅಂಜನಮೂರ್ತಿ, ಭಾಗ್ಯ ವೀರಣ್ಣ ಭಾಗವಹಿಸಿದ್ದರು.