ಮಲೇಬೆನ್ನೂರು, ಜು. 3- ಬೆಳಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗ ಳೂರಿನ ಕೆಡಿಪಿ ಫೌಂಡೇಶನ್ ವತಿಯಿಂದ ಸಂಸ್ಥೆಯ ತಿಪ್ಪೇಶ್, ಶಶಿಕುಮಾರ್, ರಮೇಶ್ ಅವರುಗಳು ನೋಟ್ ಬುಕ್ ಮತ್ತು ಪೆನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಕರಿಬಸಪ್ಪ, ಸಿಆರ್‌ಪಿ ಹನುಮಂತಪ್ಪ, ಸೇವಾದಳದ ಜಿಲ್ಲಾ ಸಂಘಟಕ ಪಕ್ಕೀರಗೌಡ, ಕೆ.ಟಿ. ಜಯಪ್ಪ, ಕೆ.ಸಿ. ಚಂದ್ರಪ್ಪ, ಟಿ.ಎಸ್. ಬಸವರಾಜ್ ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.