ದಾವಣಗೆರೆ, ಜು.3- ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ ಮತ್ತು ಬಸೆಲ್ ಇಂಟ್ರ್ಯಾಕ್ಷನ್ ಪ್ರೈ. ಲಿ. ಸಹಯೋಗದೊಂದಿಗೆ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ನಾಡಿದ್ದು ದಿನಾಂಕ 5ರಿಂದ 7ವರೆಗೆ ಫೋಟೋ ಟುಡೇ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಸಮಾರಂಭ ನಡೆಯಲಿದೆ ಎಂದು ಛಾಯಾ ಸುದ್ದಿ ಖಾಜಾಪೀರ್ ತಿಳಿಸಿದರು.
ಅವರು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜು. 5ರಂದು ನಡೆಯುವ ಪ್ರಥಮ ದಿನದ ಸಮಾರಂಭವನ್ನು ಸಂಸದ ತೇಜಸ್ವಿಸೂರ್ಯ ಉದ್ಘಾಟಿಸುವರು. ಸಮಾರಂಭದಲ್ಲಿ ದಾವಣಗೆರೆಯ ಶಂಕರ ಸ್ಟುಡಿಯೋ ಮಾಲೀಕ ಶಂಕರ್ ಕಾಟ್ವೆ ಹಾಗೂ ಹರಿಹರದ ಎಸ್.ಎಲ್.ವಿ. ಡಿಜಿಟಲ್ ಸ್ಟುಡಿಯೋ ಮಾಲೀಕ ವೆಂಕಟೇಶ್ ಕೆ.ಎಂ. ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ ತಾಲ್ಲೂಕು ಅಧ್ಯಕ್ಷ ಎಂ. ಮನು, ಗ್ರಾಮಾಂತರ ವಲಯಾಧ್ಯಕ್ಷ ಕೊಂಡಜ್ಜಿ ರಾಜಶೇಖರ್, ಪ್ರಶಸ್ತಿ ಪುರಸ್ಕೃತರಾದ ಶಂಕರ್ ಕಾಟ್ವೆ ಹಾಗೂ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.