ಕನ್ನಡಿಗರಿಗೆ ಉದ್ಯೋಗ ಭದ್ರತೆಯ ಗ್ಯಾರಂಟಿ ಸಿಗಲಿ : ಮಧುಕುಮಾರ್‌

ಕನ್ನಡಿಗರಿಗೆ ಉದ್ಯೋಗ ಭದ್ರತೆಯ ಗ್ಯಾರಂಟಿ ಸಿಗಲಿ : ಮಧುಕುಮಾರ್‌

ದಾವಣಗೆರೆ, ಜು. 2- ಕರ್ನಾಟ ಕದಲ್ಲಿನ ಕೇಂದ್ರ- ರಾಜ್ಯ ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಒಡೆತನದ ಕಂಪನಿಗಳ ಎಲ್ಲಾ ಸ್ತರದ ಉದ್ಯೋಗಗಳಲ್ಲಿ ಕನ್ನಡಿಗರಿಗೇ ಸಿಂಹಪಾಲು ಸಿಗಬೇಕು. ಆ ಮೂಲಕ ಕನ್ನಡ ನಾಡಿನ ಯುವಕರಿಗೆ ಉದ್ಯೋಗ ಭದ್ರತೆಯ ಗ್ಯಾರಂಟಿ ಯನ್ನು ನಮ್ಮನ್ನಾಳುವ ಸರ್ಕಾರಗಳು ಕಲ್ಪಿಸಿಕೊಡ ಬೇಕಾಗಿದೆ ಎಂದು ಕನ್ನಡಪರ ಚಿಂತಕ, ಚನ್ನಗಿರಿ ತಾಲ್ಲೂಕು ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 

ಡಾ. ಸರೋಜಿನಿ ಮಹಿಷಿ ವರದಿ ಮತ್ತು ಇತ್ತೀಚೆಗೆ ಜಾರಿಯಾದ  ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022ರಲ್ಲಿಯೂ ಕರ್ನಾಟಕದಲ್ಲಿ ಕನ್ನಡಿಗರಿಗೇ ಹೆಚ್ಚಿನ ಉದ್ಯೋಗವೆಂಬ ಸಂಗತಿಯನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅಪ್ರೆಂಟಿಸ್ ನಿಯಮ 1961ರ ವಿಧಿ 20ರ ಪ್ರಕಾರವಾಗಿಯೂ ಕೂಡ  ಸ್ಥಳೀಯ ರಿಗೆ ಉದ್ಯೋಗಾವಕಾಶ ನೀಡಬೇಕು ಎಂದು ನಿರ್ದಿಷ್ಟವಾಗಿ ಹೇಳಲಾಗಿದೆ. ಖಾಸಗೀಕರಣ- ಜಾಗತೀಕರಣದ ಹಿನ್ನೆಲೆಯಲ್ಲಿ ಉದ್ಯೋಗಾವಕಾಶಗಳ ಸ್ವರೂಪ ದಿನದಿನಕ್ಕೂ ಬದಲಾಗುತ್ತಿದೆ. ಉದ್ಯೋಗ ವಲಯಗಳಲ್ಲಿ ಹೊಸ ಮಾದರಿಯ ಶ್ರೇಣೀಕೃತ ವ್ಯವಸ್ಥೆಗಳು ರೂಪುಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋ ಗಾವಕಾಶಗಳು ದೊರಕುವಂತೆ ಮಾಡುವುದು ಅತೀ ಜರೂರು ಆಗಬೇಕಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಉದ್ಯೋಗಗಳಲ್ಲಿ ಮಾತ್ರವಲ್ಲದೆ, ಖಾಸಗಿ ಮತ್ತು ಅತಿ ಹೆಚ್ಚಿನ  ಉದ್ಯೋಗಾವಕಾಶವನ್ನು ಕಲ್ಪಿಸುತ್ತಿ ರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಕೂಡ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಗಳು ದೊರಕಬೇಕು. ಕನ್ನಡಿಗ ಎನ್ನಿಸಿಕೊಳ್ಳಲು ಹದಿನೈದು ವರ್ಷ ವಾಸವಾಗಿರಬೇಕು ಎನ್ನುವ ನಿಯಮದ ಜೊತೆಗೆ, ಕನ್ನಡವನ್ನು ಓದಲು-ಬರೆಯಲು-ಸಂವಹನ ನಡೆಸಲು ಬರಬೇಕು ಎಂಬ ಅಂಶವನ್ನೂ ಸೇರಿಸಿ, ನಿಯಮಗಳ ತಿದ್ದುಪಡಿಯನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

error: Content is protected !!