ಮಲೇಬೆನ್ನೂರು, ಜು.2- ಕೆ.ಎನ್.ಹಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಗಿರಿಜಮ್ಮ ಕರಿಯಪ್ಪ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀಮತಿ ಮಂಜಮ್ಮ ಶೇಖರಪ್ಪ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಶು ಇಲಾಖೆಯ ಡಾ. ಸಿದ್ದೇಶ್ ಅವರು ಚುನಾವಣಾಧಿಕಾರಿಯಾಗಿದ್ದರು.
ಗ್ರಾ.ಪಂ. ಉಪಾಧ್ಯಕ್ಷ ಪರಶುರಾಮ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ವಿ.ಕುಬೇರಪ್ಪ, ಎಂ.ಭರಮಗೌಡ ಪಾಟೀಲ್, ಮಂಜಮ್ಮ ಶೇಖರಪ್ಪ, ಜಿ.ಹೆಚ್.ಬಸವನಗೌಡ, ಹುಸೇನ್ ಸಾಬ್, ಜಿ.ಲೋಕೇಶ್, ಶ್ರೀಮತಿ ಅನಿತಾ ಮತ್ತು ಪಿಡಿಓ ಈರಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.