ಹೊಳೆಸಿರಿಗೆರೆಯಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜೀ ಅಭಿಮತ
ಮಲೇಬೆನ್ನೂರು, ಜು.2- ಹೊಸ ಸಮಾಜ ನಿರ್ಮಾಣಕ್ಕಾಗಿ ಈಶ್ವರೀಯ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸುತ್ತಿದ್ದು, ಅಧ್ಯಾತ್ಮಿಕ ಹಾಗೂ ನೈತಿಕ ಶಿಕ್ಷಣದ ಮೂಲಕ ಜನರಲ್ಲಿ ಬದಲಾ ವಣೆಗೆ ಪ್ರಯತ್ನಿಸುತ್ತಿದೆ ಎಂದು ಈಶ್ವರೀಯ ವಿಶ್ವ ವಿದ್ಯಾಲಯದ ದಾವಣಗೆರೆ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ತಿಳಿಸಿದರು.
ಹೊಳೆಸಿರಿಗೆರೆ ಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮೊನ್ನೆ ಹಮ್ಮಿ ಕೊಂಡಿದ್ದ ಜಗದಂಬಾ ಸರಸ್ವತಿ ಮಮ್ಮಾ ನವರ ಸ್ಮೃತಿ ದಿನ ಹಾಗೂ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜೀ ಸ್ಮೃತಿ ಮತ್ತು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆಯರಿಂದಲೇ ಆಡಳಿತ ನಡೆಯುವ ಈಶ್ವರೀಯ ವಿವಿಯಿಂದ 3 ವರ್ಷಗಳಿಂದ 100 ವರ್ಷದವರೆಗಿನ ಎಲ್ಲರಿಗೂ ಅಧ್ಯಾತ್ಮಿಕ ಹಾಗೂ ನೈತಿಕ ಶಿಕ್ಷಣ ನೀಡುತ್ತಿದ್ದು, ವಿಶ್ವಾದ್ಯಂತ 10 ಸಾವಿರಕ್ಕೂ ಹೆಚ್ಚು ಸೇವಾ ಕೇಂದ್ರಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಈ ಸೇವಾ ಕೇಂದ್ರಗಳ ಮೂಲಕ ಅಧ್ಯಾತ್ಮಿಕ ಶಿಕ್ಷಣದ ಜೊತೆಗೆ ದುಶ್ಚಟಗಳಿಂದ ದೂರ ಇರುವುದನ್ನು ಯೋಗ ಶಿಕ್ಷಣದ ಮೂಲಕ ತಿಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಶಿಕಾರಿಪುರ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಸ್ನೇಹ, ತುಮ್ಮಿನಕಟ್ಟೆ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮಧು ಅವರು ಉಪನ್ಯಾಸ ನೀಡಿದರು.
ಈ ವೇಳೆ ನಿವೃತ್ತ ಯೋಧರಾದ ಯಲವಟ್ಟಿಯ ಹೆಚ್.ಶಿವಕುಮಾರ್, ಸಿರಿಗೆರೆಯ ಗೋಪಾಲರೆಡ್ಡಿ, ಎನ್.ಪರಶುರಾಮಪ್ಪ, ಎರೇಸೀಮೆ ಈರೇಶ್ ಅವರನ್ನು ಮತ್ತು ಗ್ರಾ.ಪಂ. ಅಧ್ಯಕ್ಷ ಬಿ.ಮಂಜಣ್ಣ, ಆಂಜನೇಯ ದೇವಸ್ಥಾನ ಸಮಿತಿ ಅಧ್ಯಕ್ಷ ಮಾಳಗಿ ಮಲ್ಲೇಶಪ್ಪ, ಸಾಕ್ಷರತಾ ಕಾರ್ಯಕರ್ತ ಎಂ.ಶಿವಕು ಮಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶಾಸಕ ಬಿ.ಪಿ.ಹರೀಶ್, ಹಿರಿಯರಾದ ಎನ್.ಜಿ.ನಾಗನಗೌಡ್ರು, ಬಿ.ಪಂಚಪ್ಪ, ಎಂ.ಜಿ. ಪರಮೇಶ್ವರಗೌಡ, ಎಂ.ರಾಮನಗೌಡ, ಹೆಚ್.ಎಸ್.ವೀರ ಭದ್ರಯ್ಯ, ಹೆಚ್.ಎಸ್.ರುದ್ರಯ್ಯ ಸೇರಿ ದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಹೊಳೆಸಿರಿಗೆರೆ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಾಂತಾ ಸ್ವಾಗತಿಸಿದರು. ಬ್ರಹ್ಮಾಕುಮಾರಿ ಸಾವಿತ್ರ ವಂದಿಸಿದರು.