ಮಲೇಬೆನ್ನೂರು, ಜು.1- ಪಟ್ಟಣದ ಪುರಸಭೆಗೆ ಕಾಂಗ್ರೆಸ್ ಕಾರ್ಯಕರ್ತರಾದ ಬಿ. ವೀರಯ್ಯ, ಎ. ಆರಿಫ್ ಅಲಿ, ಬುಡ್ಡವರ್ ರಫೀಕ್ ಸಾಬ್, ಎಕ್ಕೆಗೊಂದಿ ಕರಿಯಪ್ಪ ಮತ್ತು ದೊಡ್ಡಮನಿ ಬಸವರಾಜ್ ಅವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಮತ್ತು ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ನೇಮಕವಾದ ನಾಮ ನಿರ್ದೇಶಿತ ಸದಸ್ಯರನ್ನು ಶನಿವಾರ ಪುರಸಭೆ ಕಚೇರಿ ಬಳಿ ಮುಖ್ಯಾಧಿಕಾರಿ ಎ. ಸುರೇಶ್, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಸಾಬೀರ್ ಅಲಿ, ದಾದಾಪೀರ್, ನಯಾಜ್, ಬಿ. ಮಂಜುನಾಥ್, ಭಾನುವಳ್ಳಿ ಸುರೇಶ್, ಕೆ.ಪಿ. ಗಂಗಾಧರ್, ಭೋವಿ ಕುಮಾರ್, ಜಿಗಳೇರ ಮಂಜಣ್ಣ, ಓ.ಜಿ ಕುಮಾರ್, ಪಿ.ಆರ್ ರಾಜು, ಚಮನ್ ಷಾ, ಮಾಜಿ ಸದಸ್ಯರಾದ ಕಣ್ಣಾಳ್ ಹನುಮಂತಪ್ಪ, ಎ.ಕೆ. ಲೋಕೇಶ್, ಜನತಾ ಬಜಾರ್ ನಿರ್ದೇಶಕ ಪಿ.ಎಚ್ ಶಿವಕುಮಾರ್, ವಕೀಲ ಬಿ.ಜಿ. ತಿಮ್ಮನಗೌಡ ಮತ್ತಿತರರು ಅಭಿನಂದಿಸಿದರು.