ವಚನಗಳು ಸರಳ ಜೀವನಕ್ಕೆ ದಾರಿ ದೀವಿಗೆಗಳು : ಮಹಾಂತೇಶ ನಿಟ್ಟೂರು

ವಚನಗಳು ಸರಳ ಜೀವನಕ್ಕೆ ದಾರಿ ದೀವಿಗೆಗಳು : ಮಹಾಂತೇಶ ನಿಟ್ಟೂರು

ಸಂತೇಬೆನ್ನೂರು, ಜು. 1-  ಮೌಢ್ಯ, ಆಡಂಬರ, ಡಾಂಭಿಕತೆಯ ಜೀವನದ ಸಂಕೋಲೆಯ ಸುಳಿಯಲ್ಲಿ ಸಿಲುಕಿ ನೊಂದ ಜೀವಗಳಿಗೆ ವಚನಗಳು ಸರಳ ಜೀವನಕ್ಕೆ ದಾರಿ ದೀವಿಗೆಗಳು. ವಚನಗಳನ್ನು ಓದಿ ಅಳವಡಿಸಿಕೊಂಡರೆ ಬದುಕು ಸುಂದರ ಎಂದು ಉಪನ್ಯಾಸಕ ಮಹಾಂತೇಶ ಬಿ. ನಿಟ್ಟೂರು ಅಭಿಪ್ರಾಯಪಟ್ಟರು.

ಇಲ್ಲಿನ ಎಸ್.ಎಸ್.ಜೆ.ವಿ.ಪಿ. ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗ ಣದಲ್ಲಿ ಹಮ್ಮಿಕೊಂಡಿದ್ದ ಮಾಸದ ಮಾತು ಕಾರ್ಯ ಕ್ರಮದಲ್ಲಿ ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ ಕುರಿತು ಅವರು ಮಾತನಾಡಿದರು. ವಚನಗಳಲ್ಲಿ ಸಾಮಾಜಿಕ, ಆರ್ಥಿಕ, ನೈತಿಕ ಮೌಲ್ಯಗಳ ಗಟ್ಟಿತನವಿದೆ. ವಚನಕಾರರು ಪ್ರಗತಿಪರರು, ಶ್ರಮಜೀವಿಗಳು, ಸಮಾಜ ಸುಧಾರಕರು, ದುಂದುವೆಚ್ಚವಿರದ ಅಂದಂದಿನ ದುಡಿಮೆಯಲ್ಲಿ ಜ್ಞಾನವನ್ನು ಜೀವಂತವಾಗಿರಿಸಿದ್ದರು. ದಾಸೋಹದ ಮೂಲಕ ದುಡಿಮೆಯಲ್ಲಿ ನೆಮ್ಮದಿ ಕಂಡುಕೊಂಡರು ಎಂದು ವಿಶ್ಲೇಷಿಸಿದರು.

ಕ್ರಾಂತಿಯ ಕಿಡಿ ಹೊತ್ತಿಸಿ, ಕಿಡಿಯನ್ನೇ ಬೆಳಕಾಗಿ ಮಾಡಿದ ಸಹನಾಶೀಲರು. ಮಡಿ, ಮೈಲಿಗೆ, ಅಂಧಶ್ರದ್ಧೆ ಬಗ್ಗೆ ವಿಚಾರಿಕ ನಿಲುವು ತಳೆದರು. ಎಲ್ಲಾ ಪವಿತ್ರ ಕ್ಷೇತ್ರಗಳು ನಮ್ಮಲ್ಲಿವೆ ಎಂದ ಶರಣರು ಹೋಮ, ಹವನ, ಅಭಿಷೇಕಗಳನ್ನು ವರ್ಜಿಸಿದರು ಎಂದು ತಿಳಿಸಿದರು.

ಎಸ್.ಹೆಚ್. ಪ್ರಕಾಶ್, ಗುಡಾಳ್ ಉಜ್ಜಿನಪ್ಪ, ತಿಮ್ಮನಗೌಡ್ರು, ನಿವೃತ್ತ ಇಂಜಿನಿಯರ್ ಮಹೇಶ್ವರಪ್ಪ, ನಾಗೇಂದ್ರಪ್ಪ, ವಿಶ್ವನಾಥ್, ಶಿವಮೂರ್ತಿ ಜಕ್ಕಲಿ, ಜಗದೀಶ್, ಎಸ್.ಸಿ. ಯಲ್ಲಪ್ಪ, ಸುರೇಶ್ ದೊಡ್ಡಬಾಯಿ ಇದ್ದರು.

error: Content is protected !!