ಎಲೆಬೇತೂರು, ಜು.1- ಇಲ್ಲಿನ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ, ತರಳಬಾಳು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ದಾವಣಗೆರೆಯ ಪಂತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿದರು.
ಪತಂಜಲಿ ಯೋಗ ಸಂಸ್ಥೆಯ ಬೇತೂರು ಮಲ್ಲಿಕಾರ್ಜುನ್, ಪಿ. ಜಯಣ್ಣ, ಜಯಶ್ರೀ, ಎಂ. ಷಡಕ್ಷರಪ್ಪ, ಶಾಲೆಯ ದೈಹಿಕ ಶಿಕ್ಷಕ ಎಂ.ಬಿ. ರವಿ ಯೋಗ ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಬಿ.ಎಂ. ಪ್ರೇಮಾ, ಶಿಕ್ಷಕರಾದ ಎಚ್.ಎಸ್. ದ್ಯಾಮೇಶ್, ನಾಗರಾಜ್, ಅನಿತಾ ಮತ್ತು ಇತರರು ಉಪಸ್ಥಿತರಿದ್ದರು.