ಸಂಸ್ಕೃತಿಯೊಂದಿಗೆ ಜ್ಞಾನ ಸಂಪಾದಿಸಿಕೊಳ್ಳಬೇಕು

ಸಂಸ್ಕೃತಿಯೊಂದಿಗೆ ಜ್ಞಾನ ಸಂಪಾದಿಸಿಕೊಳ್ಳಬೇಕು

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಜಾನಪದ ವಿದ್ಯಾಂಸ ಡಾ. ಶಂಭು ಬಳಿಗಾರ

ರಾಣೇಬೆನ್ನೂರು, ಜೂ. 30- ಸ್ಥಳಿಯ ರಾ.ತಾ.ಶಿ. ಸಂಸ್ಥೆಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾ ವಿದ್ಯಾಲಯದ 2023-24ರ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಇಂದು ಅದ್ದೂರಿಯಾಗಿ ಜರುಗಿತು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ಯಾಂಸ ಡಾ. ಶಂಭು ಬಳಿಗಾರ ಮಾತನಾ ಡುತ್ತಾ, ಆರೋಗ್ಯವೇ ಭಾಗ್ಯವೆಂದು ವಿದ್ಯಾರ್ಥಿ ಗಳು ಸ್ಪಷ್ಟವಾಗಿ ತಿಳಿದಿರಬೇಕು, ಅದಕ್ಕಾಗಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಲ್ಲದೆ ಉತ್ತಮ ಸಂಸ್ಕೃತಿಯೊಂದಿಗೆ ವಿದ್ಯಾರ್ಥಿ ಗಳು ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಂದೆ-ತಾಯಿಗಳ ಆಶೋತ್ತರಗಳನ್ನು ಈಡೇರಿಸುವುದಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ವಿಶ್ರಾಂತ ಪ್ರಾಧ್ಯಾಪಕ   ಸದಾಶಿವ.ಚ ಹುಲ್ಲತ್ತಿ ಮಾತನಾಡಿ,  ವಿದ್ಯಾರ್ಥಿಗಳು ಉಜ್ವಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.  ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಿ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು  ಎಂದು ಸಂಸ್ಥೆಯ ಅಧ್ಯಕ್ಷ   ಸುಭಾಸ್‌ ವಿ. ಸಾವುಕಾರ ತಿಳಿಸಿದರು.  ಪ್ರಾಚಾರ್ಯ  ಪ್ರೊ.ಸಿ.ಎ.ಹರಿಹರ ಅಧ್ಯಕ್ಷತೆ ವಹಿಸಿದ್ದರು.

ಆರಂಭದಲ್ಲಿ  ಚಂದನಾ ಕೆ.ಆರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು.  ಲಕ್ಷ್ಮಿ ಸಂಗಡಿಗರು ನಾಡಗೀತೆ  ಹಾಡಿದರು. ಪ್ರೊ.ಸಿ.ಎನ್. ಪೂಜಾರ   ಸ್ವಾಗತಿಸಿದರು. ಡಾ. ರಾಮರೆಡ್ಡಿ ಎಸ್. ರಡ್ಡೇರ್   ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ.ಎಲ್.ಎಮ್.ಮಾವಿನತೋಪ  ವಾರ್ಷಿಕ ವರದಿ ಓದಿದರು. ಡಾ.ಸರಸ್ವತಿ ಬಮ್ಮನಾಳ, ಪ್ರೊ.ಎನ್.ಜಿ.ರಮೇಶ ಮತ್ತು ಮುನಾವರ್‌ಅಲಿ ಖಾನ್‌ ಅವರು ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಕು.ಚೈತ್ರಾ ಇನಾಮತಿ ಕಾರ್ಯಕ್ರಮ  ನಿರ್ವಹಿಸಿದರು.

ಐ.ಕ್ಯೂ.ಎ.ಸಿ ಸಂಯೋಜಕ  ಡಾ.ಮಧುಕುಮಾರ, ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಗಳಾದ  ತರುಣ ಪೂಜಾರ ಮತ್ತು ಕುಮಾರಿ ವಿದ್ಯಾ ಗುರ್ಜರ  ವೇದಿಕೆಯ ಮೇಲೆ ಉಪಸ್ಥಿತರಿದ್ದರು.  

ಕು.ಚೈತ್ರಾ ಇನಾಮತಿ ಕಾರ್ಯಕ್ರಮ  ನಿರ್ವಹಿಸಿದರು. 

error: Content is protected !!