ಹರಿಹರ : ನಗರಸಭೆ ದಾಖಲೆಗಳ ಸುರಕ್ಷತೆಗೆ ಪ್ರತ್ಯೇಕ ವ್ಯವಸ್ಥೆ

ಹರಿಹರ : ನಗರಸಭೆ ದಾಖಲೆಗಳ ಸುರಕ್ಷತೆಗೆ ಪ್ರತ್ಯೇಕ ವ್ಯವಸ್ಥೆ

ಹರಿಹರ, ಜೂ.30- ಇಲ್ಲಿನ ನಗರಸಭೆ  ಕಟ್ಟಡ ಬಹಳ ಹಳೆಯದಾಗಿರುವ ಪರಿಣಾಮ ಸರ್ಕಾರ ನಗರಸಭೆಗೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರಿಂದ, ಹಳೇ ಕಟ್ಟಡದಲ್ಲಿ ದಾಖಲೆಗಳನ್ನು ಎಲ್ಲೆಂದರಲ್ಲಿ ಇಡುವಂತಾಗಿ,  ಸಾರ್ವಜನಿಕರು   ದಾಖಲೆಗಳನ್ನು ಪಡೆಯುವಾಗ ಸಾಕಷ್ಟು  ತೊಂದರೆ ಅನುಭವಿಸಬೇಕಾಗಿತ್ತು.  ಮಳೆ ಬಂದರೆ  ಕಡತಗಳು ಮಳೆಯ ನೀರಿನಲ್ಲಿ ನೆನೆಯುವಂತಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರು,  ಅನೇಕ ನಗರಸಭೆ ಸದಸ್ಯರು    ದಾಖಲೆಗಳನ್ನು ಸರಿಯಾದ ಕೊಠಡಿಯಲ್ಲಿ ಶೇಖರಣೆ ಮಾಡುವಂತೆ ಪೌರಾಯುಕ್ತ ಐಗೂರು ಬಸವರಾಜ್   ಅವರಿಗೆ ಮನವಿ ಮಾಡಿದ್ದರು.  

ಎಲ್ಲೆಂದರಲ್ಲಿ ಇದ್ದಂತಹ ಕಡತಗಳನ್ನು ಶಿಸ್ತು ಬದ್ಧವಾಗಿ   ಇಡುವುದಕ್ಕೆ ಸೌಭಾಗ್ಯಮ್ಮ, ಮಲ್ಲೇಶ್ ಎಂಬ ಇಬ್ಬರು ಸಿಬ್ಬಂದಿಗಳನ್ನು ನೇಮಕ ಮಾಡಿ, ಅದಕ್ಕೆ ಬೇಕಾದ ಹೊಸ ರಾಕ್‌ಗಳನ್ನು  ಖರೀದಿಸಿ,  ನಗರಸಭೆ ಎಲ್ಲಾ ಇಲಾಖೆಗೆ ಸಂಬಂಧಿಸಿದ ಕಡತಗಳನ್ನು ಶೇಖರಿಸುವ ವ್ಯವಸ್ಥೆಯನ್ನು ಪೌರಾಯುಕ್ತರು ಮಾಡಿದ್ದಾರೆ.  

error: Content is protected !!