ದಾವಣಗೆರೆ, ಜೂ.30 – ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಸಮುದಾಯ ಕೃಷಿ ಹೊಂಡ, ಕೃಷಿ ಹೊಂಡ, ಪ್ಯಾಕ್‍ಹೌಸ್, ಟ್ರ್ಯಾಕ್ಟರ್ 20 ಪಿಟಿಒ ಎಚ್‍ಪಿ ಒಳಗಿನ ಪ್ರಾಥಮಿಕ ಸಂಸ್ಕರಣಾ ಘಟಕ ಮತ್ತು ಎಸ್.ಎಂ.ಎ.ಎಂ. ಯೋಜನೆಯಡಿಯಲ್ಲಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಹಾಗೆ ಫೈಬರ್ ದೋಟಿ (ಅಡಿಕೆ ಕಟಾವು ಮಾಡಲು) ಪಡೆಯಲು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಜುಲೈ 6 ರೊಳಗೆ ಅರ್ಜಿಯೊಂದಿಗೆ ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣ ಪತ್ರದೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯಿತಿ) ಹೊನ್ನಾಳಿ ಕಚೇರಿಯಲ್ಲಿ ಹಾಗೂ ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.