ಹರಿಹರ, ಜೂ. 30 – ನಗರದ ಹೊಳೆ ಮೆಟ್ಟಿಲು ರಸ್ತೆ ಯಲ್ಲಿರುವ ಕಾಶಿ ನೀಲಕಂಠೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಕುರುಹಿನಶೆಟ್ಟಿ ಸಮಾಜ ಮಹಿಳಾ ಮಂಡಳಿ ಮತ್ತು ಹೊಲಿಗೆ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಲಾಯಿತು. ಸಮಾಜದ ಪ್ರೌಢ ಸಂಘದ ಗೌರವ ಸಲಹೆಗಾರ ಅಣ್ಣಪ್ಪ ಶಾವಿ ಅವರು ಮಹಿಳಾ ಮಂಡಳಿ ಉದ್ಘಾಟನೆ ಮಾಡಿದರು. ಸಮಾಜದ ಅಧ್ಯಕ್ಷ ಬಸವರಾಜ್ ಇಂಡಿ ಶುಭ ಕೋರಿದರು.
ಗುತ್ತೂರು ಹೊಲಿಗೆ ಕಲಿಕೆ ತರಬೇತಿ ಶಿಬಿರದ ಉದ್ಘಾಟನೆಯನ್ನು ಮುಖ್ಯಸ್ಥರಾದ ಜಯಲಕ್ಷ್ಮಿ ಶಶಿಕುಮಾರ್ ಮೆಹರ್‌ವಾಡೆ ಮತ್ತು ತರಬೇತುದಾರರಾದ ಉಮಾರಾಣಿ ಗಂಗಾಧರ್ ಅವರು ನೆರವೇರಿಸಿದರು.
ಆರಂಭಕ್ಕೆ ಪ್ರಮೋದಿನಿ ಪ್ರಾರ್ಥನೆ ಮಾಡಿದರು. ಅಮಿತಾ ಇಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಖಾ ಶಾವಿ ಸ್ವಾಗತಿಸಿದರು. ಸ್ನೇಹ ನಾಗರಾಜ್ ಪದಾಧಿಕಾರಿಗಳ ಪರಿಚಯ ಮಾಡಿಸಿಕೊಟ್ಟರು. ವಿದ್ಯಾ ಗಡದ್ ನಿರೂಪಣೆ ಮಾಡಿದರು. ಭಾರತಿ ಶಾವಿ ವಂದಿಸಿದರು.
ರಾಧಾ ಹನುಮಂತಪ್ಪ ಸ್ವ-ರಚಿತ ಕವನ ವಾಚನ ಮಾಡಿದರು. ಪ್ರಮುಖರಾದ ವಿಜಯ್ ಕುಮಾರ್, ಶಶಿಕಲಾ, ನಾಗರಾಜ್ ಬುಟ್ಟಾ, ಚಂದ್ರಶೇಖರ್ ಅಂಬ್ರದ್, ಗೋವಿಂದ್ ಗಡದ್, ಕೋಟೇಶ್ ಭಂಡಾರಿ, ರಾಘು ಇಂಡಿ, ಮಹಿಳಾ ಸಂಘದ ನೂತನ ಅಧ್ಯಕ್ಷರಾದ ಸರಸ್ವತಿ ಐರಣಿ, ಸುಜಾತ, ರೋಹಿಣಿ, ರಾಧಾ, ಪೂರ್ಣಿಮಾ, ಸುಮಾ, ಸಾವಿತ್ರಮ್ಮ, ಅನಸೂಯ, ಸರಸ್ವತಿ ಇಂಡಿ, ಮಂಜುಳಾ ಇನ್ನಿತರರು ಹಾಜರಿದ್ದರು.