ದಾವಣಗೆರೆ, ಜೂ.30- ಇಲ್ಲಿನ ಡಿಸಿಎಂ ಟೌನಶಿಪ್‌ನಲ್ಲಿನ ಶ್ರೀ ರಾಮಕೃಷ್ಣ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಾಡ ಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಿಸಲಾಯಿತು. ಶಾಲೆಯ ಯು.ಕೆ.ಜಿ ವಿದ್ಯಾರ್ಥಿನಿ ಎನ್.ಎಂ. ವಂಶಿಕಾ ನಾಡ ಪ್ರಭು ಕೆಂಪೇಗೌಡರ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ಈ ವೇಳೆ ಮುಖ್ಯ ಶಿಕ್ಷಕ ಡಿ.ಸಿ. ಸುರೇಶ್, ಶಿಕ್ಷಕಿಯರಾದ ಶೋಭಾ ಹುಲ್ಲುಮನಿ, ಕಾವ್ಯ, ಆಶಾ, ಮಹಾಲಕ್ಷ್ಮಿ, ಸೌಮ್ಯ, ಕರಿಬಸಮ್ಮ, ಶ್ರೀದೇವಿ, ತನುಶ್ರೀ ಹಾಗೂ ಪಾಲಕರು, ಮಕ್ಕಳು ಇದ್ದರು.
January 17, 2025