ಕಡ್ಲೇಬಾಳು : ಇಂದಿನಿಂದ ಸದ್ಗುರುತ್ರಯರ ಮೂರ್ತಿ ಪ್ರತಿಷ್ಠಾಪನೆ

ದಾವಣಗೆರೆ ತಾಲ್ಲೂಕಿನ ಕಡ್ಲೇಬಾಳು ಗ್ರಾಮದ ಶ್ರೀ ಸದ್ಗುರು ಕೃಪಾ ಭವನ (ದೇವರಹಟ್ಟಿ)ದಲ್ಲಿ ಇಂದಿನಿಂದ ಜುಲೈ 1ರ ವರೆಗೆ ಮೂರು ದಿನಗಳ ಕಾಲ `ಸದ್ಗುರುತ್ರಯರ ಮೂರ್ತಿ ಪ್ರತಿಷ್ಠಾಪನೆ’ ಹಾಗೂ `ಶ್ರೀ ಮಹಾ ರಾಜರ ದಿವ್ಯ ಸ್ಥಿರ ಪಾದುಕೆಗಳ ಪ್ರತಿಷ್ಠಾಪನಾ’ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಇಂದು ಬೆಳಿಗ್ಗೆ 11ಕ್ಕೆ ಹೆಬ್ಬಳ್ಳಿಯಿಂದ ಶ್ರೀ ಮಹಾರಾಜರ ಪಾದುಕೆಗಳೊಂದಿಗೆ ಶ್ರೀ ದತ್ತಾವದೂತ ಗುರುಗಳ ಸ್ವಾಗತ, ಮಹಾ ಮಂಗಳಾರತಿ ಮತ್ತು ಮಹಾ ಪ್ರಸಾದ ನಡೆಯಲಿದೆ. 

ಸಂಜೆ 4ಕ್ಕೆ ನಾಗಸುಬ್ರಹ್ಮಣ್ಯ ಮಂದಿರದಿಂದ ಸದ್ಗುರು ಕೃಪಾಭವನದವರೆಗೆ ಶೋಭಾಯಾತ್ರೆ, 7ಕ್ಕೆ ಪ್ರತಿಷ್ಠಾಪನಾಂಗ ಹವನ ಹಾಗೂ ದಿವ್ಯ ಸ್ಥಿರ ಪಾದುಕೆಗಳ ಮೂರು ವಿಗ್ರಹಗಳ ಜಲಾಧಿವಾಸ, ಧಾನ್ಯಾಧಿವಾಸ ಹಾಗೂ ಶಯ್ಯಾಧಿವಾಸ ನಡೆಯಲಿವೆ.

ನಾಳೆ ದಿನಾಂಕ 30ರ ಬೆಳಗ್ಗೆ 6ರಿಂದ ಕಾಕಡಾರತಿ ಹಾಗೂ ಭಜನೆ, 7ರಿಂದ ಪುಣ್ಯಾಹ ವಾಚನ, ನಂತರ ಸದ್ಗುರುತ್ರಯರನ್ನು ಎಬ್ಬಿಸುವುದು.

10ಕ್ಕೆ ಮಹಾರಾಜರ ದಿವ್ಯ ಸ್ಥಿರ ಪಾದುಕೆಗಳ ಹಾಗೂ ಮೂರು ಸದ್ಗುರು ತ್ರಯರ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ. ನಂತರ ಪೂರ್ಣಾಹುತಿ ಮತ್ತು ಪ್ರಸಾದ ಸೇವೆ.

ಸಂಜೆ 4ರಿಂದ 6ರ ವರೆಗೆ ಮಹಿಳಾ ಮಂಡಳಿಗಳಿಂದ ಭಜನೆ, 7ಕ್ಕೆ ಭರತನಾಟ್ಯ, ರಾತ್ರಿ 8ಕ್ಕೆ ದೀಪೋತ್ಸವ, ಮಹಾಮಂಗಳಾರತಿ, ಮಂತ್ರಪುಷ್ಪ, ಅಷ್ಟಾವಧಾನ ಸೇವೆ ಹಾಗೂ ಶ್ರೀ ಮಹಾರಾಜರ ಶೇಜಾರತಿ ನಡೆಯಲಿದೆ.

ನಾಡಿದ್ದು ದಿನಾಂಕ ಜು. 1ರ ಬೆಳಗ್ಗೆ 6ರಿಂದ ಭಜನೆ ಕಾರ್ಯಕ್ರಮ, 7.30ರಿಂದ ಮಧ್ಯಾಹ್ನ 12.30ರ ವರೆಗೆ ಹನುಮಾನ್‌ ಚಾಲೀಸಾ ಪಠಣ, ಮಧ್ಯಾಹ್ನ 12.30ರಿಂದ ಪ್ರವಚನ, 1.30ಕ್ಕೆ ಮಹಾ ಮಂಗಳಾರತಿ ಹಾಗೂ ಪ್ರಸಾದ ಸೇವೆ ನಡೆಯಲಿದೆ.

error: Content is protected !!