ತುಂಗಭದ್ರೆಯಲ್ಲಿ ಹೆಚ್ಚಿದ ಹರಿವು

ತುಂಗಭದ್ರೆಯಲ್ಲಿ ಹೆಚ್ಚಿದ ಹರಿವು

ಹರಿಹರ, ಜೂ.28-  ಆಗುಂಬೆ, ಶೃಂಗೇರಿ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಮುಂಗಾರು ಮಳೆ ಹೆಚ್ಚಾಗಿ ಸುರಿಯುತ್ತಿರುವ ಕಾರಣ  ನಗರದ ತುಂಗಭದ್ರಾ ನದಿಯಲ್ಲಿ, ದಿನದಿಂದ ದಿನಕ್ಕೆ, ನೀರಿನ ಹರಿವಿನ ಪ್ರಮಾಣವು ಹೆಚ್ಚಾಗುತ್ತಾ ಸಾಗಿದೆ.  ರಾಜ್ಯದಾದ್ಯಂತ ಇನ್ನೂ ನಾಲ್ಕರಿಂದ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ನದಿ ತೀರದ ಆಸು ಪಾಸಿನಲ್ಲಿ ವಾಸಿಸುವಂತಹ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮತ್ತು ಜಾನುವಾರುಗಳನ್ನು ನದಿಯಲ್ಲಿ ಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!