ಸೇಂಟ್‌ಜಾನ್ಸ್ ವಿದ್ಯಾರ್ಥಿ ಪರಿಷತ್ತಿನ ಸಾರ್ವತ್ರಿಕ ಚುನಾವಣೆ

ಸೇಂಟ್‌ಜಾನ್ಸ್ ವಿದ್ಯಾರ್ಥಿ ಪರಿಷತ್ತಿನ ಸಾರ್ವತ್ರಿಕ ಚುನಾವಣೆ

ದಾವಣಗೆರೆ, ಜೂ. 28- ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ನಿಟ್ಟಿನಲ್ಲಿ ನಗರದ ಸೇಂಟ್‍ಜಾನ್ಸ್ ವಿದ್ಯಾಸಂಸ್ಥೆಯ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ತಿನ ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಯಿತು. 

ವಿವಿಧ ಸ್ಥಾನಗಳಿಗೆ ವಿದ್ಯಾರ್ಥಿಗಳನ್ನು ಅಭ್ಯರ್ಥಿ ಗಳನ್ನಾಗಿ ಕಣಕ್ಕಿಳಿಸಿ ನೂತನ ಆಂಡ್ರಾಯ್ಡ್  ಮೊಬೈಲ್ ನಲ್ಲಿ ಎಲೆಕ್ಷನ್ ಆಪ್‍ ಅಳವಡಿಕೆ ಮಾಡಿಕೊಂಡು, ಯಥಾವತ್ತಾಗಿ ಸಾರ್ವತ್ರಿಕ ಚುನಾವಣಾ ಪದ್ಧತಿಯಂತೆ ಗುಪ್ತ ಮತದಾನ ಪದ್ಧತಿ ಅನುಸರಿಸಲಾಯಿತು.

ವಿದ್ಯಾರ್ಥಿ ಪರಿಷತ್ತಿನ ಈ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ, ಶಿಸ್ತು ಪಾಲನಾ ಮುಖ್ಯಸ್ಥ, ಕ್ರೀಡಾ ವಿಭಾಗದ ಮುಖ್ಯಸ್ಥ ಮೊದಲಾದ ವಿಭಾಗಗಳಿಗೆ ಅಭ್ಯರ್ಥಿಗಳು ಸ್ಪರ್ಧಿಸಿ, ಮತ ಯಾಚಿಸಿ ಪ್ರಜಾಪ್ರಭುತ್ವದ ಚುನಾವಣಾ ವೈಖರಿಯಂತೆ ಚುನಾವಣೆಯನ್ನು ಯಶಸ್ವಿಗೊಳಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್.ಅನಿಲ್ ಕುಮಾರ್‍, ಕಾರ್ಯದರ್ಶಿ ಉಮಾಪತಯ್ಯ,  ಖಜಾಂಚಿ ಪ್ರವೀಣ್ ಹುಲ್ಲುಮನೆ ಮತ ಯಂತ್ರದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ ಚಾಲನೆ ನೀಡಿದರು. 

ವಿದ್ಯಾರ್ಥಿ ಪರಿಷತ್ತಿನ ಚುನಾವಣಾ ಮುಖ್ಯಸ್ಥರನ್ನಾಗಿ ಮೌನೇಶ್ ಹಾಗೂ ಶ್ರೀಮತಿ ಉಮ್ಮೇಸಲ್ಮಾ ಅವರನ್ನು ಆಯೋಜಿಸಲಾಗಿದ್ದು, ಸಮಸ್ತ ಸಮಾಜ ವಿಜ್ಞಾನ ಶಿಕ್ಷಕ ವೃಂದದವರೊಂದಿಗೆ  ಯಶಸ್ವಿಗೊಳಿಸಿದರು. 

ಈ ಸನ್ನಿವೇಶದಲ್ಲಿ ಸಂಸ್ಥೆಯ ಪ್ರಾಂಶುಪಾಲ ಸೈಯ್ಯದ್ ಆರಿಫ್ ಆರ್.  ಹಾಗೂ ಶ್ರೀಮತಿ ಪ್ರೀತಾ.ಟಿ.ರೈ,  ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ ಹಾಗು ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

error: Content is protected !!