ಯುವಕರಿಗೆ ಬೇಕು ಕೆಂಪೇಗೌಡರ ಚಿಂತನೆ

ಯುವಕರಿಗೆ ಬೇಕು ಕೆಂಪೇಗೌಡರ ಚಿಂತನೆ

ಹರಿಹರದಲ್ಲಿ ನಾಡಪ್ರಭು ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗುರುಬಸವರಾಜ್  

ಹರಿಹರ, ಜೂ.27-  ನಾಡಪ್ರಭು ಕೆಂಪೇಗೌಡರು ಒಂದು ಸಮುದಾಯಕ್ಕೆ ಸೀಮಿತವಾಗದೇ ನಾಡಿನ ಎಲ್ಲಾ ಜನರ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದು ತಹಶೀಲ್ದಾರ್ ಗುರುಬಸವರಾಜ್ ಹೇಳಿದರು.

ನಗರದ ಮರಿಯಾ ನಿವಾಸ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ರವರ 515ನೇ ಜಯಂತಿ ಸಮಾರಂಭ  ಉದ್ಘಾಟಿಸಿ, ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಕೋಟಿ ಕೋಟಿ ಜನಸಂಖ್ಯೆ ಇದ್ದು, ಅದಕ್ಕೆ ಅನುಗುಣವಾಗಿ ನಗರವನ್ನು ಕಟ್ಟುವುದರ ಜೊತೆಗೆ ಅಲ್ಲಿನ ಜನರಿಗೆ ಯಾವುದೇ ರೀತಿಯ ತೊಂದರೆಗಳು ಬರದಂತೆ ನೋಡಿಕೊಂಡಿದ್ದಾರೆ. ಅನೇಕ ಕೆರೆಗಳ ನಿರ್ಮಾಣ, ದೊಡ್ಡದಾದ ಮಾರುಕಟ್ಟೆ, ಸುಗಮ ಸಂಚಾರ ವ್ಯವಸ್ಥೆ  ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಿದ್ದು, ಬೆಂಗಳೂರು ಇಂದು ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವು ದಕ್ಕೆ  ಅವರ ಕೊಡುಗೆಯೇ  ಪ್ರಮುಖ ಕಾರಣವಾಗಿದೆ.    ಇಂದಿನ ಯುವಕರು ಕೆಂಪೇಗೌಡರ ಚಿಂತನೆ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು  ಅವರು ಹೇಳಿದರು.

ಬಿಇಓ ಎ. ಹನುಮಂತಪ್ಪ ಮಾತನಾಡಿ, ನಾಡಿನ ಜನರ ಒಳಿತಿಗಾಗಿ ಶ್ರಮವಹಿಸಿದ ಸಾಧಕರು ಮತ್ತು ದಾರ್ಶನಿಕರ ಬಗ್ಗೆ ವಿದ್ಯಾರ್ಥಿ ಗಳು, ಪುಸ್ತಕಗಳನ್ನು ಓದುವುದರ ಮೂಲಕ ತಿಳಿದುಕೊಳ್ಳಬೇಕು. ಕೆಂಪೇಗೌಡರ ಸಾಧನೆ ಅಪಾರವಾದದ್ದು, ಅವರು ದೂರದೃಷ್ಟಿ ಹೊಂದಿದ ನಾಯಕರಾಗಿದ್ದು, ಎಲ್ಲಾ ಸಮುದಾಯದ ಜನರನ್ನು ಸಮಾನವಾಗಿ ಕಾಣುತ್ತಿದ್ದರು.  ವೈದ್ಯರಾಗಿ, ಜೊತೆಗೆ ಚಿಂತಕರಾಗಿ ನಾಡಿನ ಒಳಿತಿಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು. 

ತಾಪಂ ಇಓ ರಾಮಕೃಷ್ಣಪ್ಪ ಮಾತನಾಡಿ, ಕೆಂಪೇಗೌಡರವರು ಬೆಂಗಳೂರು ನಿರ್ಮಾಣ ಮಾಡು ವಾಗ ಬಹಳಷ್ಟು ಕನಸು ಕಟ್ಟಿಕೊಂ ಡಿದ್ದರು.   ನಗರ ಬೆಳೆದಂತೆ ನಾಲ್ಕು ಗಡಿಗಳನ್ನು ನಿಗದಿ ಮಾಡಿ ಅದಕ್ಕೆ ಪೂರಕವಾಗಿ ನಗರವನ್ನು  ಬೆಳೆಸಿ ದರು. ಜೊತೆಗೆ ಒಂಭತ್ತು ಕೆರೆ ನಿರ್ಮಾಣ, ಒಂಭತ್ತು ದ್ವಾರ ನಿರ್ಮಾಣ ಮಾಡಿ, ಪ್ರಪಂಚ ದಾದ್ಯಂತ ಜನರು ಬೆಂಗಳೂರಿಗೆ ಬಂದಾಗ ಯಾವುದೇ ರೀತಿಯ ತೊಂದರೆ ಇರದಂತೆ ವ್ಯವಸ್ಥೆ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಈ ವೇಳೆ ಕಾರ್ಯಕ್ರಮದ ಪೂರ್ವದಲ್ಲಿ ನಗರದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೆರವಣಿಗೆಗೆ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಮಂಜುಳಾ,  ಕೃಷ್ಣಪ್ಪ, ಗಿರಿಯಮ್ಮ ಕಾಲೇಜಿನ ಪ್ರಾಂಶುಪಾಲರಾದ ಸುಜಾತ, ಶಿಕ್ಷಣ ಇಲಾಖೆಯ ಬಸವರಾಜಯ್ಯ, ಬಿಸಿಎಂ  ಇಲಾಖೆಯ ಪಾಟೀಲ್ ಹಾಗೂ ಇತರರು ಹಾಜರಿದ್ದರು.

error: Content is protected !!