ದಾವಣಗೆರೆ, ಜೂ. 24 ಎಸ್.ಎಸ್. ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಹೆರಿಗೆಯನ್ನು ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ ಮಾಡಲಾಗುವುದು.
ಬಿಪಿಎಲ್ ನಲ್ಲಿ 4ಎ ಅಡಿಯಲ್ಲಿ ದಾಖಲಾದ ರೋಗಿಗಳನ್ನು ಎಬಿಎಆರ್‌ಕೆ ಎಂದು ಪರಿಗಣಿಸಲಾಗುವುದು. ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಔಷಧ ಮತ್ತು ಸಲಕರಣೆ ಹೊರತುಪಡಿಸಿ ಸಹಜ ಹೆರಿಗೆ ಮತ್ತು ಶಸ್ತ್ರ ಚಿಕಿತ್ಸೆಗೆ ವಿನಾಯಿತಿ ನೀಡಲಾಗುವುದು. ಯಶಸ್ವಿನಿ ಯೋಜನೆಯಡಿಯಲ್ಲಿ ಸಹಜ ಹೆರಿಗೆ ಮತ್ತು ಶಸ್ತ್ರ ಚಿಕಿತ್ಸೆ ಹೆರಿಗೆಗಳನ್ನು ಉಚಿತ ಎಂದು ಪರಿಗಣಿಸಲಾಗುವುದು.
ಈ ಸೌಲಭ್ಯಗಳು ಸ್ಪೆಷಲ್ ವಾರ್ಡ್‌ನಲ್ಲಿ ದಾಖಲಾದ ರೋಗಿಗಳಿಗೆ ಅನ್ವಯವಾಗುವುದಿಲ್ಲ. ಕೆಲವೊಂದು ರಕ್ತ ಪರೀಕ್ಷೆ ಮತ್ತು ಸ್ಕ್ಯಾನಿಂಗ್ ಪರೀಕ್ಷೆಗಳು ಉಚಿತವಾಗಿ ಇರುತ್ತವೆ. ಈ ಎಲ್ಲಾ ಸೌಲಭ್ಯಗಳು ಬರುವ ಜುಲೈ 31ರವರೆಗೆ ಮಾತ್ರ ಲಭ್ಯವಿರುತ್ತವೆ.