ಕಬ್ಬೂರ್ ಎಜ್ಯುಕೇಷನ್ ಸೊಸೈಟಿ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ವಿನ್ನರ್ ಅಕಾಡೆಮಿಯಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಯುಪಿಎಸ್ಸಿ ಸಾಧಕರ ಜೊತೆ ಸಂವಾದ ನಡೆಯಲಿದೆ.
ಅಧ್ಯಕ್ಷತೆಯನ್ನು ಶಿವರಾಜ್ ಕಬ್ಬೂರ್ ವಹಿಸುವರು. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕು. ಸೌಭಾಗ್ಯ ಬೀಳಗಿಮಠ್ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯುವುದು. ಮುಖ್ಯ ಅತಿಥಿಗಳಾಗಿ ಡಾ. ಅನಿತಾ ಹೆಚ್. ದೊಡ್ಡಗೌಡರ್ ಭಾಗವಹಿಸುವರು.