ರಾಣೇಬೆನ್ನೂರು : ಯೋಗದಲ್ಲಿದೆ ಆರೋಗ್ಯದ ಗುಟ್ಟು

ರಾಣೇಬೆನ್ನೂರು : ಯೋಗದಲ್ಲಿದೆ ಆರೋಗ್ಯದ ಗುಟ್ಟು

ರಾಣೇಬೆನ್ನೂರು, ಜೂ.23- ನಗರದ ಆರ್.ಟಿ.ಇ.ಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ 10ನೇ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಯೋಗದಿಂದ ರೋಗಮುಕ್ತ ಎಂಬಂತೆ ಯೋಗದಲ್ಲೇ ಆರೋಗ್ಯದ ಗುಟ್ಟು ಅಡಗಿದೆ ಎಂದು  ಆರ್.ಟಿ.ಇ.ಎಸ್ ಸಂಸ್ಥೆಯ ಕಾರ್ಯದರ್ಶಿ ಸೀತಾ ಕೋಟಿ ಹೇಳಿದರು.

ಕಾಲೇಜಿನ ಪ್ರಾಚಾರ್ಯ ಸಿ.ಎ. ಹರಿಹರ, ಎನ್‌.ಜಿ. ರಮೇಶ್‌, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಸರಸ್ವತಿ ಬಮ್ಮನಾಳ, ದೈಹಿಕ ಶಿಕ್ಷಣ ನಿರ್ದೇಶಕ ಮುನ್ವರಲಿಖಾನ್, ಇತಿಹಾಸ ಪ್ರಾಧ್ಯಾಪಕ ನಾಗರಾಜ ಲಮಾಣಿ, ಕನ್ನಡ ಪ್ರಾಧ್ಯಾಪಕ ಡಿ.ಟಿ. ಲಮಾಣಿ, ಅನಂತಕುಮಾರ, ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಹಾಗೂ ವಿದ್ಯಾರ್ಥಿಗಳಿದ್ದರು.

error: Content is protected !!