ರಕ್ತದಾನದಿಂದ ಅನೇಕರಿಗೆ ಸಹಕಾರಿ

ರಕ್ತದಾನದಿಂದ ಅನೇಕರಿಗೆ ಸಹಕಾರಿ

ಸಂಕಲ್ಪ ಸೇವಾ ಫೌಂಡೇಶನ್  ಕಾರ್ಯಕ್ರಮದಲ್ಲಿ ದಿನೇಶ್ ಕೆ. ಶೆಟ್ಟಿ

ದಾವಣಗೆರೆ, ಜೂ. 24 – ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಸ್ವಚ್ಛವಾಗಿರುತ್ತದೆ. ಸಮಾಜದ ಅನೇಕರಿಗೆ ಅಗತ್ಯವಾಗಿರುವ ರಕ್ತ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು.

ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ  ಸಂಕಲ್ಪ ಸೇವಾ ಫೌಂಡೇಶನ್, ಕ್ರೀಡಾ ಭಾರತಿ ಹಾಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆ ಇವರ  ಸಹಯೋಗದೊಂದಿಗೆ ನಗರದ ಪಿ.ಜೆ. ಬಡಾವಣೆಯಲ್ಲಿರುವ ಹರ್ಷಿತ್ ಕಂಪ್ಯೂಟರ್‌ ಆವರಣದಲ್ಲಿ ಕಳೆದ ವಾರ ಏರ್ಪಡಿಸಿದ್ದ ಸ್ವಯಂ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ತಾನೂ ಸಹ ಸರಿಸುಮಾರು 50 ಬಾರಿ  ರಕ್ತವನ್ನು ದಾನ ಮಾಡಿದ್ದೇನೆ. 30 ವರ್ಷಗಳಿಂದ ತಮ್ಮ ಸ್ನೇಹಿತರೊಂದಿಗೆ ಸೇರಿ ಅನೇಕ ರಕ್ತದಾನ ಶಿಬಿರಗಳನ್ನು ನಡೆಸಿರುವುದಾಗಿ ತಿಳಿಸಿದ ಅವರು,  ಸಂಕಲ್ಪ ಸೇವಾ ಸಂಸ್ಥೆಯ ಸೇವಾ ಕಾರ್ಯಗಳಿಗೆ ದಿನೇಶ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. 

ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಶ್ರೀಮತಿ  ಲತಿಕಾ ದಿನೇಶ್ ಕೆ. ಶೆಟ್ಟಿ ಮಾತನಾಡಿ, ರಕ್ತದಾನ  ಮಾಡುವುದರ ಬಗ್ಗೆ ತಿಳಿಸಿದರು. 

ಚಿಗಟೇರಿ ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರದ ವೈದ್ಯಾಧಿಕಾರಿ ಗೀತಾ ಡಿ.ಹೆಚ್. ಮಾತನಾಡಿ, ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಆಗುವ ಅನುಕೂಲತೆ ಹಾಗೂ ರಕ್ತದಾನದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚನಾಧಿಕಾರಿ ದುರ್ಗೇಶ್ ಪೂಜಾರ್,  ವೈದ್ಯಾಧಿಕಾರಿ ಡಾ. ಅಕ್ಷಯ, ಕ್ರೀಡಾ ಭಾರತಿ ರಾಜ್ಯ ಸಹ ಕಾರ್ಯದರ್ಶಿ ಬಸವರಾಜ್ ಎಸ್.ಎನ್., ಶಿವಮೊಗ್ಗದ ಹಿರಿಯ ಆರ್.ಎಸ್.ಎಸ್ ಕಾರ್ಯಕರ್ತ ಮಲ್ಲಿಕಾರ್ಜುನ ಎಸ್.ಎನ್., ಹಿರಿಯ ಯೋಗ ಶಿಕ್ಷಕ ಕಣಕುಪ್ಪಿ ಕರಿಬಸಪ್ಪ ಉಪಸ್ಥಿತರಿದ್ದರು.

ಸಂಕಲ್ಪ ಸೇವಾ ಫೌಂಡೇಶನ್  ಸಂಸ್ಥಾಪಕ ಅಧ್ಯಕ್ಷ ಜಿ.ಮಹಾಂತೇಶ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಭಾರತಿ ಹಾಗೂ ಸಂಕಲ್ಪ ಸೇವಾ ಫೌಂಡೇಶನ್   ಕಾರ್ಯಕರ್ತರಾದ ನಾಗರಾಜ ಕುರ್ಡೇಕರ್, ಬಿ.ಕೆ. ನಾಗರಾಜ್, ಕೆ.ಜಿ. ನಾಗರಾಜ್, ಕೆ.ಜೆ. ಬದರಿ ಪ್ರಸಾದ್, ಆನಂದ್ ಬಿ. ಜೈನ್, ಎ.ಎಂ. ಪ್ರಶಾಂತ್ ಕುಮಾರ್, ಎ.ಎಂ. ವಿನಯ್ ಕುಮಾರ್, ಎಸ್‌ಜೆಎಂ ಪ್ರಕಾಶ್, ಹರ್ಷಿತಾ ಕಂಪ್ಯೂಟರ್ ಸಿಬ್ಬಂದಿ ವರ್ಗದವರಾದ  ಎಂ. ಮಾಲಾ, ಕುಸ್ಮಿದಾಬಾನು, ಶಿವಪ್ಪ ಹಾಗೂ  ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಕಾಶ್ ಪಿ. ಕುರ್ಡೇಕರ್ ವಂದಿಸಿದರು.

error: Content is protected !!