ಯೋಗದಿಂದ ಶಾಂತಿ – ತಾಳ್ಮೆ

ಯೋಗದಿಂದ ಶಾಂತಿ – ತಾಳ್ಮೆ

ದಾವಣಗೆರೆ, ಜೂ. 24 – ನಗರದ ವಿಶ್ವಚೇತನ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. 

ಪ್ರಾಂಶುಪಾಲ ಪ್ರಕಾಶ್ ಜೋಗಿ ಮಾತನಾಡಿ, ಯೋಗ ಮನುಷ್ಯನ ಆರೋಗ್ಯಕ್ಕೆ ದಿವ್ಯ ಔಷಧವಿದ್ದಂತೆ, ನಾವು ನಿರಂತರವಾಗಿ ಯೋಗಾಭ್ಯಾಸವನ್ನು ಮಾಡುವುದರಿಂದ  ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವುದರೊಂದಿಗೆ ಆರೋಗ್ಯವಂತರಾಗಿರುತ್ತೇವೆ. ಇದರಿಂದ ಮಾನಸಿಕ ನೆಮ್ಮದಿ, ಶಾಂತಿ, ತಾಳ್ಮೆ, ಸಹನಶೀಲತೆ, ಕ್ರಿಯಾಶೀಲತೆ, ಸಹೃದಯತೆ ಮನೆ ಮಾಡುವವು. ಆರೋಗ್ಯಕ್ಕಾಗಿ ಯೋಗ, ವೈಯಕ್ತಿಕ ಯೋಗಕ್ಷೇಮ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸುವಲ್ಲಿ ಯೋಗದ ಪಾತ್ರ ಅತ್ಯಂತ ಮಹತ್ವ, ಪ್ರತಿ ದಿನ ಯೋಗ ದಿನವಾಗಬೇಕು, ಯೋಗ ಬಲ್ಲವನು ನಿರೋಗಿ  ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ವಿದ್ಯಾರ್ಥಿನಿ ಕು. ಜಾಹ್ನವಿ ಮಾತನಾಡಿ, ಯೋಗ ಇಂದಿನ ಒತ್ತಡದ ಜೀವನಕ್ಕೆ ಅನಿವಾರ್ಯವಾಗಿದೆ, ಯೋಗ ಮಾಡುವುದರಿಂದ ರೋಗಗಳನ್ನು ದೂರವಿಡಬಹುದು ಮತ್ತು ಉತ್ತಮವಾದ ಆರೋಗ್ಯಕ್ಕೆ ಯೋಗ ಅತ್ಯಗತ್ಯವಾಗಿದೆ ಎಂದರು.

ಶಾಲೆಯ ಡೀನ್ ಆದ ಸುಬ್ಬರಾವ್, ಶಾಲಾ ಆಡಳಿತಾಧಿಕಾರಿ ಶ್ರೀಮತಿ ಪ್ರೀತಿ, ಮುಖ್ಯೋಪಾಧ್ಯಾಯ ಬಿ.ಎಂ. ಬಸವರಾಜಯ್ಯ, ಉಪ ಪ್ರಾಂಶುಪಾಲರಾದ ಯುವರಾಜ್ ಕಾಂಬಳೆ ಅವರು ಸಮಾರಂಭದ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ವಿನಾಯಕ ಖಮಿತ್ಕರ್ ಸ್ವಾಗತಿಸಿದರು.

error: Content is protected !!