`ಕನ್ನಡದಾರತಿ’ ಗೀತಗಾಯನ ತರಬೇತಿ

`ಕನ್ನಡದಾರತಿ’ ಗೀತಗಾಯನ ತರಬೇತಿ

ದಾವಣಗೆರೆ, ಜೂ. 22- ನಮ್ಮ ಚೆಲುವ ಕನ್ನಡ ನಾಡು `ಕರ್ನಾಟಕ’ ಎಂದು ಮರು ನಾಮಕರಣಗೊಂಡು 50 ವರ್ಷಗಳಾಗಿದ್ದು, ಕರ್ನಾಟಕದ ಈ ಸುವರ್ಣ ಸಂಭ್ರಮದ ಅಂಗವಾಗಿ ವರ್ಷ ಪೂರ್ತಿ ಕನ್ನಡದ ಹಬ್ಬವನ್ನು ಆಚರಿಸಲಾಗುತ್ತಿದೆ.

ಈ ಸಂಭ್ರಮವನ್ನು ಅರ್ಥಪೂರ್ಣಗೊಳಿ ಸಲು ನಗರದ ಸುಶ್ರಾವ್ಯ ಸಂಗೀತ ವಿದ್ಯಾಲ ಯವು `ಕನ್ನಡದಾರತಿ’ ಎಂಬ ವಿನೂತನ ಪರಿಕಲ್ಪನೆಯೊಂದನ್ನು ಯೋಜಿಸಿದೆ. ಇದರ ಅಡಿಯಲ್ಲಿ ವರ್ಷಪೂರ್ತಿ ಕನ್ನಡ ನಾಡು-ನುಡಿ ಮಹತ್ವವನ್ನು ಬಿಂಬಿಸುವ 50 ಆಯ್ದ ಗೀತೆಗಳ ಗಾಯನ ತರಬೇತಿ ಹಮ್ಮಿಕೊಳ್ಳಲಾಗಿದೆ. ಪ್ರತಿ ಶಿಬಿರದಲ್ಲಿ 5 ಗೀತೆಗಳ ತರಬೇತಿ ನೀಡಲಿದ್ದು, ಒಟ್ಟು 10 ಶಿಬಿರಗಳನ್ನು ಆಯೋಜಿಸಲಾಗುವುದು.  ಈಗಾಗಲೇ 2 ತರಬೇತಿಗಳು ಯಶಸ್ವಿಯಾಗಿದ್ದು, 10 ಗೀತೆಗಳ ತರಬೇತಿ ನೀಡಲಾಗಿದೆ.

3ನೇ ಶಿಬಿರವನ್ನು ಬೆಂಗಳೂರಿನ ಯಲ ಹಂಕ, 4ನೇ ಫೇಸ್‌, ಬಿಬಿಎಂಸಿ ಸಮುದಾಯ ಭವನದಲ್ಲಿ ಇದೇ ದಿನಾಂಕ 26 ರಿಂದ 30ರವರೆಗೆ 5 ದಿನಗಳ ಕಾಲ ಹಮ್ಮಿಕೊಂಡಿದ್ದು ಶಿಬಿರದಲ್ಲಿ ಕನ್ನಡದ ವಿವಿಧ ಗೀತ ಪ್ರಕಾರಗಳಾದ ಭಾವ ಗೀತೆ, ಜನಪದ ಗೀತೆ, ತತ್ವಪದ, ವಚನ ಭಕ್ತಿಗೀತೆಗಳನ್ನೊ ಳಗೊಂಡ 10 ಗೀತೆಗಳ ಗಾಯನ ತರಬೇತಿ ನೀಡಲಾಗು ವುದು. ಸುಶ್ರಾವ್ಯ ಸಂಗೀತ ವಿದ್ಯಾಲಯ ನಿರ್ದೇ ಶಕರಾದ ಶ್ರೀಮತಿ ಯಶಾ ದಿನೇಶ್  ಅವರು ಗಾಯನದ ತರಬೇತಿ ನೀಡಲಿದ್ದಾರೆ. ವಿವರಗಳಿಗೆ ಡಾ. ಕವಿತಾ ಪ್ರಕಾಶ್ (73534 46463), ಡಿ.ಆರ್. ಅಂಬಿಕಾ (98802 35456) ಅವರನ್ನು ಸಂಪರ್ಕಿಸಬಹುದಾಗಿದೆ.

error: Content is protected !!