ಕಮಲಾ ಹಂಪನಾ ನಿಧನಕ್ಕೆ ಜೆಂಬಿಗಿ ಮೃತ್ಯುಂಜಯ ಸಂತಾಪ

ದಾವಣಗೆರೆ, ಜೂ. 22- ಕನ್ನಡದ ಹೆಸರಾಂತ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಅವರ ನಿಧನಕ್ಕೆ ಕನ್ನಡ ಉಪನ್ಯಾಸಕರೂ,  ಸಾಹಿತಿಯೂ ಆದ  ಜೆಂಬಿಗಿ ಮೃತ್ಯುಂಜಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬದುಕಿನುದ್ದಕ್ಕೂ ಮುಖ ಕಮಲದಲ್ಲಿ ನಗುವನ್ನು ಮಲ್ಲಿಗೆಯಂತೆ ಅರಳಿಸಿಕೊಂಡು ಸಾಗಿದ್ದ ಅವರು ತಮ್ಮ 88 ರಲ್ಲೂ ಹರೆಯದ ಹುರುಪು, ಉತ್ಸಾಹ, ಕ್ರಿಯಾಶೀಲತೆಯಿಂದಿದ್ದರು. ತಮ್ಮ ಪತಿ ಹಂಪನಾ ಅವರ ಜೊತೆ ಬೌದ್ಧಿಕ ಸಾಹಚರ್ಯ ಹೇಗೆ ಸಾಧಿಸಬೇಕು ಎಂಬುದಕ್ಕೆ ಮಾದರಿ, ಕಮಲಾ-ಹಂಪನಾ ಅಪರೂಪದ ಜೋಡಿ, ನಿಜ ಜೀವನದ ಆದರ್ಶ ದಂಪತಿಗಳು ಇವರದು ಅಂತರ್ಜಾತೀಯ ವಿವಾಹ ಅನುರೂಪ ದಾಂಪತ್ಯ ಎಂದು ಮೃತ್ಯುಂಜಯ ಬಣ್ಣಿಸಿದ್ದಾರೆ.

error: Content is protected !!