ನಾಡೋಜ ಡಾ. ಕಮಲಾ ಹಂಪನಾ ನಿಧನಕ್ಕೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಸಂತಾಪ

ನಾಡೋಜ ಡಾ. ಕಮಲಾ ಹಂಪನಾ ನಿಧನಕ್ಕೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಸಂತಾಪ

ದಾವಣಗೆರೆ, ಜೂ. 22 – ಕನ್ನಡ ಸಾಹಿತ್ಯದ ಶ್ರೇಷ್ಠ ಲೇಖಕರೂ, ಸಂಶೋಧಕರೂ,  ಕವಯಿತ್ರಿಯೂ, ಮೂಡಬಿದರೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆದ ನಾಡೋಜ ಶ್ರೀಮತಿ ಕಮಲಾ ಹಂಪನಾ ಅವರ ಆಗಲಿಕೆಗೆ ನಗರದ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ತೀವ್ರ ಶೋಕ ವ್ಯಕ್ತಪಡಿಸಿದೆ.

48ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಕಮಲಾ ಹಂಪನಾ ಅವರ ನಿಧನವು ಕನ್ನಡ ಸಾಹಿತ್ಯಕ್ಕಾದ ಬಹು ದೊಡ್ಡ ನಷ್ಟ ಎಂದು ವೇದಿಕೆಯ ಶ್ರೀಮತಿ ಮಲ್ಲಮ್ಮ ನಾಗರಾಜ್, ಶ್ರೀಮತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್, ಶ್ರೀಮತಿ ಆರುಂಧತಿ ರಮೇಶ್, ಶ್ರೀಮತಿ ವೀಣಾ ಕೃಷ್ಣಮೂರ್ತಿ, ಶ್ರೀಮತಿ ಜಯಮ್ಮ ನೀಲಗುಂದ, ಶ್ರೀಮತಿ ಸುನೀತ ಪ್ರಕಾಶ್ ಮತ್ತು ಇತರರು ಕಂಬನಿ ಮಿಡಿದಿದ್ದಾರೆ. 

ವನಿತಾ ಸಾಹಿತ್ಯ ವೇದಿಕೆ ವತಿಯಿಂದ ಪ್ರತಿಭಾನ್ವಿತ ಮಹಿಳಾ ಸಾಹಿತಿಗಳಿಗೆ `ವನಿತಾ ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ಪ್ರತಿ ವರ್ಷ ಕೊಡುತ್ತಿದ್ದು, ಕಳೆದ 8-10 ವರ್ಷಗಳ ಹಿಂದೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಮಲಾ ಹಂಪನಾ ಪಾಲ್ಗೊಂಡಿದ್ದನ್ನು ಮಲ್ಲಮ್ಮ ನಾಗರಾಜ್ ಮೆಲಕು ಹಾಕಿದ್ದಾರೆ.   ಪ್ರಶಸ್ತಿಯ ದಾನಿ – `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಅವರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!