ಅಂತರರಾಷ್ಟ್ರೀಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಾಗೃತಿ

ಅಂತರರಾಷ್ಟ್ರೀಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಾಗೃತಿ

ದಾವಣಗೆರೆ, ಜೂ.23- ದಾವಣಗೆರೆ – ಹರಿಹರ ರೈಲು ನಿಲ್ದಾಣಗಳ ನಡುವಿನ ಎಲ್‍ಸಿ ಗೇಟ್ ನಂ.207 ರಲ್ಲಿ ಅಂತರರಾಷ್ಟ್ರೀಯ ರೈಲ್ವೆ  ಲೆವೆಲ್ ಕ್ರಾಸಿಂಗ್ ಜಾಗೃತಿ ದಿನದ ನಿಮಿತ್ತ  ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಆರ್‍ಪಿಎಫ್ ನಿರೀಕ್ಷಕ ಬಿ.ಎನ್.ಕುಬೇರಪ್ಪ ಅವರು ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. 

ರಸ್ತೆ ಬಳಕೆದಾರರಿಗೆ ಎಲ್‍ಸಿ ಗೇಟ್ ದಾಟುವಾಗ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಿದರು. ಗೇಟನ್ನು ಮುಚ್ಚುವಾಗ ಅಥವಾ ತೆರೆಯು ವಾಗ ನಿಲುಗಡೆ ಸೂಚಕವನ್ನು ಗಮನಿಸಿ, ನಂತರ ಗೇಟ್ ಸಂಪೂರ್ಣವಾಗಿ ತೆರೆದಿದೆ ಮತ್ತು ಗೇಟ್ ದಾಟುವುದಕ್ಕಿಂತ ಮೊದಲು ಯಾವುದೇ ರೈಲು ಹಾದುಹೋಗುತ್ತಿಲ್ಲ  ಎಂದು ಖಚಿತಪಡಿಸಿ, ಅವಸರದಲ್ಲಿ  ಗೇಟ್ ದಾಟಲು ಪ್ರಯತ್ನಿಸಿದರೆ, ಅದು ಅಪಘಾತಕ್ಕೆ ಕಾರಣವಾಗಬಹುದು. ಇದು ಜೀವಹಾನಿ, ರೈಲ್ವೆ ಆಸ್ತಿ ಮತ್ತು ಖಾಸಗಿ ಆಸ್ತಿ ಹಾನಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರು ರೈಲ್ವೆ ಗೇಟ್ ದಾಟುವಾಗ ಸುರಕ್ಷಿತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿಸಿದಲ್ಲಿ ರೈಲ್ವೆ ಕಾಯ್ದೆ ಪ್ರಕಾರ, ಜಾಮೀನು ರಹಿತ ಪ್ರಕರಣವಾಗಿದ್ದು, 5 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಆರ್.ಪಿ.ಎಫ್ ಸಹಾಯಕ ಉಪ ನಿರೀಕ್ಷಕರಾದ ಲಕ್ಷ್ಮವ್ವ ಪಾಟೀಲ್, ಹಿರಿಯ ವಿಭಾಗ ಇಂಜಿನಿಯರ್ ನಿರಂಜನ್ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಉಪಸ್ಥಿತರಿದ್ದರು.

error: Content is protected !!