ದಾವಣಗೆರೆ, ಜೂ. 21- ಚೆನ್ನೈನಲ್ಲಿ ಈಚೆಗೆ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ 2024 ಸ್ಪರ್ಧೆಯ 10-11 ವರ್ಷದ ಸಬ್ ಜ್ಯೂನಿಯರ್ ವಿಭಾಗದಲ್ಲಿ ನಗರದ ನಿಧಿ ಬೇತೂರ್ ಕರಾಟೆ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾಳೆ. ಕೆ.ಪಿ. ಜೋಸ್ ಅವರಿಂದ ತರಬೇತಿ ಪಡೆದಿರುವ ನಗರದ ನಿಜಲಿಂಗಪ್ಪ ಬಡಾವಣೆಯ ಬಾಪೂಜಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ನಿಧಿ ಅಭಿಷೇಕ್ ಬೇತೂರು ಹಾಗೂ ಶ್ವೇತಾ ದಂಪತಿ ಪುತ್ರಿ.
January 11, 2025