ದಾವಣಗೆರೆ, ಜೂ. 23 – ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಇದುವರೆಗೂ ಸಹಾಯಧನ ಪಾವತಿ ಆಗದೇ ಇದ್ದಲ್ಲಿ, ಸಂಬಂಧಪಟ್ಟ ಫಲಾನುಭವಿಗಳು ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ತೆರೆಳಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಾಗೂ ಕಾರಣಾಂತರ ಗಳಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳದೇ ಇರುವ ಫಲಾನುಭವಿಗಳು ಗ್ರಾಮ ಒನ್, ಸೇವಾ ಸಿಂಧೂ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು.
ಸಂಪರ್ಕಿಸಬೇಕಾದ ವಿಳಾಸ: ದಾವಣಗೆರೆ ದುರ್ಗಾಂಬಿಕ ಶಾಲೆ ಹತ್ತಿರವಿರುವ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯ ತುಷಾರ್ 93806 29266, ಹರಿಹರ ಶಿವಮೊಗ್ಗ ರಸ್ತೆ ಪಿಎಲ್ಡಿ ಬ್ಯಾಂಕ್ ನೆಲಮಹಡಿ ಕಿರಣ್ 97312 62426, ಜಗಳೂರು ತಾಲ್ಲೂಕು ಪಂಚಾಯಿತಿ ಆವರಣದ ಸ್ತ್ರೀಶಕ್ತಿ ಭವನದಲ್ಲಿ ಈಶ್ವರ 97401 92819, ಹೊನ್ನಾಳಿ ಟಿಎಂ ರಸ್ತೆಯಲ್ಲಿನ ಮಲ್ಲಪ್ಪ ಕಾಂಪ್ಲೆಕ್ಸ್ನಲ್ಲಿರುವ ಕಚೇರಿಯಲ್ಲಿ ಸುದೀಪ್ 98440 19027, ಚನ್ನಗಿರಿ, ಶಿವಮೊಗ್ಗ ರಸ್ತೆಯಲ್ಲಿನ ಜಿ.ಎಂ. ಕಾಂಪ್ಲೆಕ್ಸ್ನಲ್ಲಿನ ಕಚೇರಿಯಲ್ಲಿ ಶಿವಣ್ಣ 96866 01791 ಇವರನ್ನು ಅಥವಾ ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.