ದಾವಣಗೆರೆ, ಜೂ.19- ನಗರದ ಎಸ್.ಎಸ್ ಹೈಟೆಕ್ ಬಡಾವ ಣೆಯ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 3 ಜನ ಆಪಾದಿತರನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.30 ಲಕ್ಷ ಮೌಲ್ಯದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಮಹಮದ್ ಅಜ್ಗರ್, ಸುಭಾನ್ ವುಲ್ಲಾ ಯಾನೆ ಶಾಹೀದ್ ಅಫ್ರಿದಿ, ಜಾಫರ್ ಸಾಧಿಕ್ ಇವರು ಚಿತ್ರದುರ್ಗ ಮೂಲದ ಆರೋಪಿಗಳಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಮತ್ತು ಸಿಬ್ಬಂದಿ ಎಎಸ್ಐ ಈರಣ್ಣ, ಹರೀಶ್ ನಾಯ್ಕ್, ಪುರುಷೋತ್ತಮ, ಮಂಜಪ್ಪ, ಶಿವರಾಜ, ಹರೀಶ್ ಅವರ ಕಾರ್ಯದ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
December 22, 2024