ಈಡಿಗ ಮಹಾಮಂಡಳಿಯ ಪದಾಧಿಕಾರಿಗಳ ಪಟ್ಟಿ ಘೋಷಣೆ

ದಾವಣಗೆರೆ, ಜೂ.19- ಚನ್ನಗಿರಿ ತಾಲ್ಲೂಕು ಕಬ್ಬಳ ಗ್ರಾಮದಲ್ಲಿ ಈಚೇಗೆ ನಡೆದ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ವಾರ್ಷಿಕ ಸಭೆಯಲ್ಲಿ ಪ್ರಣವಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಜಿಲ್ಲೆ ಹಾಗೂ ತಾಲ್ಲೂಕಿನ ಪದಾಧಿಕಾರಿ ಮತ್ತು ಯುವ ಹಾಗೂ ಮಹಿಳಾ ಘಟಕದ ಪದಾಧಿಕಾರಿ ಪಟ್ಟಿ ಬಿಡುಗಡೆ ಮಾಡಿದರು.

ರಾಜ್ಯ ಗೌರವಾಧ್ಯಕ್ಷರಾಗಿ ಎಚ್‌.ವೈ. ಆನಂದ್‌, ಜಿಲ್ಲಾಧ್ಯಕ್ಷರಾಗಿ ಆರ್‌. ಪ್ರತಾಪ್‌, ಜಿಲ್ಲಾ ಉಪಾಧ್ಯಕ್ಷರಾಗಿ ಗಿರೀಶ್‌, ದಾನೇಶ್, ರಾಜೇಶ್‌, ರಮೇಶ್‌ ಸಿಂಗ್ರಿಹಳ್ಳಿ,  ಪ್ರಧಾನ ಕಾರ್ಯದರ್ಶಿಯಾಗಿ ಪಿ. ಪ್ರಕಾಶ್‌, ಜಂಟಿ ಕಾರ್ಯದರ್ಶಿ ಮಹಾಂತೇಶ್‌, ಜಿಲ್ಲಾ ಸಂಚಾಲಕ ಡಿ.ಸಿ. ಸುರೇಶ್‌, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎನ್‌. ಮಲ್ಲಿಕಾರ್ಜುನ್‌ ಆಯ್ಕೆಯಾಗಿದ್ದಾರೆ.

ರಾಜ್ಯ ಮತ್ತು ಜಿಲ್ಲಾ ಮಹಿಳಾ ಘಟಕ : ರಾಜ್ಯ ಮಹಿಳಾ ಉಪಾಧ್ಯಕ್ಷೆ ಸ್ಥಾನಕ್ಕೆ ಯಶೋಧಮ್ಮ,  ಜಿಲ್ಲಾಧ್ಯಕ್ಷೆ ದೀಪಾ, ಚನ್ನಗಿರಿ ತಾಲ್ಲೂಕು ಅಧ್ಯಕ್ಷೆ ಧನಲಕ್ಷ್ಮಿ  ಆಯ್ಕೆಯಾಗಿದ್ದಾರೆ.

ದಾವಣಗೆರೆ ತಾಲ್ಲೂಕು ಕಮಿಟಿ : ಗೌರವಾಧ್ಯಕ್ಷರಾಗಿ  ರಮೇಶ್‌ ನರಗನಹಳ್ಳಿ, ಅಧ್ಯಕ್ಷರಾಗಿ ವೆಂಕಟೇಶ್‌ ಕಿತ್ತೂರು, ಉಪಾಧ್ಯಕ್ಷರಾಗಿ ಸುನೀಲ್ ಚಿನ್ನಸಮುದ್ರ.

ಜಗಳೂರು ತಾಲ್ಲೂಕು ಕಮಿಟಿ : ಗೌರವಾಧ್ಯಕ್ಷರಾಗಿ ಅಜ್ಜಣ್ಣ ಮೆದಿಕೇರನಹಳ್ಳಿ, ಅಧ್ಯಕ್ಷರಾಗಿ ಗೋವಿಂದಪ್ಪ ಮರಿಕುಂಟೆ, ಉಪಾಧ್ಯಕ್ಷ ಸುರೇಶ್ ಸೋಮನಹಳ್ಳಿ, ಕಾರ್ಯದರ್ಶಿ ರಮೇಶ್‌ ಹೊಸಕೆರೆ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಅಜ್ಜಯ್ಯ ಆಯ್ಕೆಯಾಗಿದ್ದಾರೆ.

ಚನ್ನಗಿರಿ ತಾಲ್ಲೂಕು ಕಮಿಟಿ : ಗೌರವಾಧ್ಯಕ್ಷ ಸ್ಥಾನಕ್ಕೆ ಪ್ರಭಾಕರ್‌ ಕಬ್ಬಳ, ಅಧ್ಯಕ್ಷರಾಗಿ ಹಾಲೇಶಪ್ಪ ಕಬ್ಬಳ, ಉಪಾಧ್ಯಕ್ಷರಾಗಿ ಸುರೇಶ್‌ ಸೇವಾನಗರ ಆಯ್ಕೆಯಾಗಿದ್ದಾರೆ.

ನ್ಯಾಮತಿ ತಾಲ್ಲೂಕು ಕಮಿಟಿ : ಗೌರವಾಧ್ಯಕ್ಷ ಸ್ಥಾನಕ್ಕೆ  ಸುರೇಶ್‌ ರಾಣೇಬೆನ್ನೂರು, ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಗೋಪೇನಹಳ್ಳಿ, ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜಪ್ಪ ಗೋಪೇನಹಳ್ಳಿ ಆಯ್ಕೆಯಾಗಿದ್ದಾರೆ.

ಹೊನ್ನಾಳಿ ತಾಲ್ಲೂಕು ಕಮಿಟಿ : ಗೌರವಾಧ್ಯಕ್ಷ ಸ್ಥಾನಕ್ಕೆ ಜಯ್ಯಪ್ಪ ಇ.ಟಿ. ಕುಳಗಟ್ಟೆ, ಅಧ್ಯಕ್ಷ ಮಹಾಂತೇಶ್ ಇ.ಟಿ. ಕುಳಗಟ್ಟೆ, ಉಪಾಧ್ಯಕ್ಷ ತಿಪ್ಪೇಶ್‌, ಕಾರ್ಯದರ್ಶಿ ಇ.ಟಿ ರಂಗಸ್ವಾಮಿ, ಸದಸ್ಯರಾಗಿ ಇ.ಟಿ. ದಾಸಪ್ಪ ಮತ್ತು ರಾಜು ಚನ್ನಾಪುರ ಆಯ್ಕೆಯಾಗಿದ್ದಾರೆ.

ದಾವಣಗೆರ ಜಿಲ್ಲಾ ಯುವ ಘಟಕ : ಗೌರವಾಧ್ಯಕ್ಷರಾಗಿ ಶಿವರಾಜ್‌ ಎಸ್‌ಓಜಿ ಕಾಲೋನಿ, ಅಧ್ಯಕ್ಷ ಸಂತೋಷ್‌ ಅಣಜಿ, ಉಪಾಧ್ಯಕ್ಷರಾಗಿ ನಿಖಿಲ್‌ ಕೊಡಗನೂರು, ಸ್ವಾಮಿ ಮರಿಕುಂಟೆ, ಮಂಜುನಾಥ್‌ ಭಾರತ್‌ ಕಾಲೋನಿ, ಕಾರ್ಯದರ್ಶಿಯಾಗಿ ರಾಘವೇಂದ್ರ ಕೊಡಗನೂರು ಆಯ್ಕೆಯಾಗಿದ್ದಾರೆ.

error: Content is protected !!