ದಾವಣಗೆರೆ, ಜೂ.19 – ದಾವಣಗೆರೆ ಅಂಚೆ ವಿಭಾಗೀಯ ಡಾಕ್-ಅದಾಲತ್ತನ್ನು ಇಂದು ಸಂಜೆ 4 ಗಂಟೆಗೆ ನಗರದ ಮಂಡಿಪೇಟೆಯ ಗಡಿಯಾರ ಕಂಬದ ಹತ್ತಿರವಿರುವ ಪ್ರಧಾನ ಅಂಚೆ ಕಚೇರಿಯ ಮೊದಲನೇ ಮಹಡಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಸಲಾಗುತ್ತದೆ. ಸಾರ್ವಜನಿಕರು ಮತ್ತು ಅಂಚೆ ಗ್ರಾಹಕರು ಅಂಚೆ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಮತ್ತು ಸಲಹೆಗಳನ್ನು ಅಂಚೆ ಅಧೀಕ್ಷಕರ ಕಚೇರಿಗೆ ಸಲ್ಲಿಸಬೇಕೆಂದು ಅಂಚೆ ಚಂದ್ರಶೇಖರ್ ತಿಳಿಸಿದ್ದಾರೆ.
January 11, 2025