ದಾವಣಗೆರೆ, ಜೂ. 19- ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಪಿ.ಜೆ. ಬಡಾವಣೆಯ ಮೂರನೇ ಕ್ರಾಸ್ನಲ್ಲಿರುವ ಶ್ರೀ ಪರಮಹಂಸ ಅಥರ್ವ ಆಯುರ್ಧಾಮದಲ್ಲಿ ಇದೇ ದಿನಾಂಕ 21 ರಂದು ಅನಘ ಯೋಗ ಕ್ರಿಯಾ ಶಿಬಿರ ಆರಂಭವಾಗಲಿದೆ ಎಂದು ಯೋಗ ತರಬೇತುದಾರ ಕೆ.ಎಂ. ಕೊಟ್ರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಗವನ್ನು ಯಾವಾಗ, ಯಾವ ಕಾಲದಲ್ಲಿ, ಎಷ್ಟು ಸಮಯ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಕ್ರಮಬದ್ಧವಾಗಿ ಯೋಗ ಕಲಿಸಿ ಕೊಡುವ ಉದ್ದೇಶದಿಂದ ಅನಘ ಯೋಗ ಕ್ರಿಯಾ ಶಿಬಿರವನ್ನು ಉಚಿತವಾಗಿ ಕಲಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.
ಜೂ.21ರ ಶುಕ್ರವಾರ ಬೆಳಿಗ್ಗೆ 8 ಗಂಟೆೆಗೆ ಯೋಗ ಗುರು ಚನ್ನಬಸವಣ್ಣ ಅವರು ಶಿಬಿರವನ್ನು ಉದ್ಘಾಟಿಸುವರು. ಮೊದಲ ದಿನ ಸೂರ್ಯ ನಮಸ್ಕಾರ ಮಾತ್ರ ಕಲಿಸಿಕೊಡಲಾಗುವುದು ಎಂದರು.
ಜೂ. 24 ರಿಂದ 21 ದಿನಗಳ ಕಾಲ ಎರಡು ಬ್ಯಾಚ್ಗಳಲ್ಲಿ ಶಿಬಿರ ನಡೆಯಲಿದೆ. ಪ್ರತಿ ಬ್ಯಾಚ್ನಲ್ಲಿ 12 ಜನರಿಗೆ ಮಾತ್ರ ಅವಕಾಶ ಇದೆ. ಆಸಕ್ತರು ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ 63622-26505 ಗೆ ಸಂಪರ್ಕಿಸುವಂತೆ ಕೋರಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಡಾ.ಬಿ.ಸಿ. ಸುಮತಿ ಉಪಸ್ಥಿತರಿದ್ದರು.