ಎಸ್ಸೆಸ್-94: ‘ಕಿಂಗ್’ ನೆನಪಿನ ಕಾಣಿಕೆ

ದಾವಣಗೆರೆ, ಜೂ.19- ಹಿರಿಯ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು 94ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ನಗರದ  ಸ್ಟೇಡಿಯಂ ಸ್ನೇಹ ಬಳಗ, ದಿನೇಶ್ ಕೆ.ಶೆಟ್ಟಿ ಅಭಿಮಾನಿ ಬಳಗ ಹಾಗೂ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಚೆಸ್‍ನ ‘ಕಿಂಗ್’ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉದ್ಯಮಿಗಳೂ, ಕ್ರೀಡಾ ಪ್ರೋತ್ಸಾಹಕರಾದ ಅಥಣಿ ವೀರಣ್ಣ, ಕ್ರೀಡಾಪಟುಗಳ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಶಿವಕುಮಾರ್ ಡಿ., ಕುರುಡಿ ಗಿರೀಶ್ ಮತ್ತಿತರರಿದ್ದರು.

error: Content is protected !!