ದಾವಣಗೆರೆ : ನಗರದ ದೇವರಾಜ ಅರಸು ಬಡಾವಣೆಯ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೂತನ ಸಂಸದರಾಗಿ ಚುನಾಯಿತ ರಾಗಿರುವ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಇಂದು ಬೆಳಿಗ್ಗೆ 11 ಗಂಟೆಗೆ ತುಲಾಭಾರ ಕಾರ್ಯಕ್ರಮ, ಮಡಿಲಕ್ಕಿ ಕಾರ್ಯಕ್ರಮ, ವಿಶೇಷ ಪೂಜೆಯೊಂದಿಗೆ ಅಮ್ಮ ನವರ ಆಶೀರ್ವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಪ್ರಕಾಶ್ ಪಾಟೀಲ್ ಹಾಗೂ ಕಾರ್ಯದರ್ಶಿ ವಿ. ವೀರಭದ್ರರಾವ್ ತಿಳಿಸಿದ್ದಾರೆ.
January 10, 2025