ಶಿವ ಧ್ಯಾನ ಮಂದಿರದಲ್ಲಿ ಇಂದು – ನಾಳೆ ಯೋಗ ತರಬೇತಿ ಶಿಬಿರ

ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಂದು ಮತ್ತು ನಾಳೆ ಗುರುವಾರ ದೇವರಾಜ ಅರಸು ಬಡಾವಣೆ `ಬಿ’ಬ್ಲಾಕ್‌ನಲ್ಲಿರುವ ಶಿವ ಧ್ಯಾನ ಮಂದಿರದಲ್ಲಿ ಯೋಗ ತರಬೇತಿ ಶಿಬಿರ ನಡೆಯಲಿದೆ. ಸಂಜೆ 5 ರಿಂದ 6ರವರೆಗೆ ನಡೆಯುವ ಶಿಬಿರದಲ್ಲಿ ಯೋಗ ಶಿಕ್ಷಕ ಬಿ.ಎಸ್. ನೀಲಪ್ಪ ಅವರು (94812 17798) ಯೋಗ ತರಬೇತಿ ನೀಡಲಿದ್ದಾರೆ.

error: Content is protected !!