ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಡವರ ಬದುಕಿನ ಗಾಯದ ಮೇಲೆ ಬರೆ

ದಾವಣಗೆರೆ, ಜೂ. 16- ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಕುರುಡು ನಾಟಕವನ್ನಾಡುತ್ತಾ, ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ರೂಪಿಸಿದ್ದು, ಕುರುಡು ನಾಟಕವನ್ನಾಡುತ್ತಿರುವ ನಿಮ್ಮಗಳ ಬಣ್ಣ ಬಯಲಾಗುವ ಕಾಲ ಹತ್ತಿರವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ತಿಳಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‌ಟಿ ಅಡಿಯಲ್ಲಿ ಅಂದರೆ ಪ್ರತಿ ಲೀ.ಗೆ 45 ಡೀಸೆಲ್, 50 ಪೆಟ್ರೋಲ್ ಮಾರಾಟ ಮಾಡಬಹುದು. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಎಸ್.ಎಸ್. 32 ರೂ., ರಾಜ್ಯ ಸರ್ಕಾರ 30 ರೂ. ಗಳನ್ನು ವಿಧಿಸಿ 103 ರಿಂದ 105 ರೂ. ಗಳ ವರೆಗೆ ಏರಿಕೆ ಮಾಡಿ ಸಾರ್ವಜನಿಕ ಬದುಕಿನಲ್ಲಿ ಹೊರೆಯಾಗುವಂತೆ ನೋಡಿಕೊಳ್ಳುತ್ತಿವೆ.

ಕಾರಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾ ಆದರೆ ಜನಸಮಾನ್ಯರಿಗೆ ಹೊರೆಯಾಗುತ್ತದೆ ಎಂಬ ಸಲಹೆಯನ್ನು ತಮ್ಮ ಸಲಹೆಗಾರರು ನೀಡುತ್ತಿಲ್ಲ. ಶ್ರೀಮಂತರು ಬದುಕುವ ದಾರಿಯನ್ನು ತೋರಿಸುತ್ತಾ, ಕಣ್ಣಿಗೆ ಬಟ್ಟೆ ಕಟ್ಟಿ ಕುರುಡು ನಾಟಕವನ್ನಾಡಿಸುತ್ತಿದ್ದಾರೆ. ಆದ್ದರಿಂದ ತಾವುಗಳು ಚುನಾವಣೆ ಪ್ರಣಾಳಿಕೆಯಲ್ಲಿ ಸಾರ್ವಜನಿಕರಿಗೆ ಆಸೆ, ಆಮಿಷಗಳನ್ನು ತೋರಿಸಿ ಗಾಯದ ಮೇಲೆ ಬರೆ ಎಳೆದಿದ್ದೀರಿ ಎಂದು ರವಿಕುಮಾರ್ ಹೇಳಿದ್ದಾರೆ.

ಜನರೇ ತಕ್ಕ ಪಾಠ ಕಲಿಸುವ ಕಾಲ ದೂರಿಲ್ಲ. ಕೂಡಲೇ ಎಚ್ಚೆತ್ತುಕೊಂಡರೆ ಸರಿ, ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತೀರಿ ಎಂದು ಎಚ್ಚರಿಸಿದ್ದಾರೆ. 

error: Content is protected !!