ಕರ್ನಾಟಕ ಸುಗಮ ಸಂಗೀತ ಪರಿಷತ್, ಅನುಶ್ರೀ ಸಂಗೀತ ಶಾಲೆ ಹಾಗೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಸಂಯುಕ್ತಾಶ್ರಯುದಲ್ಲಿ ಇಂದು ಸಂಜೆ 5 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ಸ್ಥಳೀಯ ಕವಿಗಳ ಪದ್ಯಗಾಯನ `ಸ್ವರಾಭರಣ’ದ ಸಮಾರೋಪ ಸಮಾರಂಭ ನಡೆಯಲಿದೆ.
ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ ಕಾರ್ಯಾಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ ವಹಿಸಲಿದ್ದು, ಅನುಶ್ರೀ ಸಂಗೀತ ಶಾಲೆಯ ಸಂಸ್ಥಾಪಕರಾದ ವಿದುಷಿ ವೀಣಾ ಸದಾನಂದ ಹೆಗಡೆ ಸ್ಥಳೀಯ ಕವಿ, ಕವಯತ್ರಿಯರ ಕವನಗಳಿಗೆ ರಾಗ ಸಂಯೋಜಿಸಿ, ಹಾಡಿ `ಸ್ವರಾಭರಣ’ ಪ್ರಸ್ತುತಿಪಡಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಿ. ವಾಮದೇವಪ್ಪ, ಪ್ರವೀಣ್ ಬಿ.ವಿ., ಪ್ರಶಾಂತ ಉಡುಪ, ನಾಗರಾಜ್ ವಿ.ಬೈರಿ, ಶ್ರೀಮತಿ ಶಾಂತಾ ಎಸ್.ಶೆಟ್ಟಿ, ಡೇವಿಡ್ ಪ್ರತಿಭಾಂಜಲಿ ಆಗಮಿಸಲಿದ್ದಾರೆ.