ಪಲ್ಲಾಗಟ್ಟೆ ಗ್ರಾ.ಪಂ ಅಧ್ಯಕ್ಷರಾಗಿ ರೇಣುಕಮ್ಮ

ಪಲ್ಲಾಗಟ್ಟೆ ಗ್ರಾ.ಪಂ ಅಧ್ಯಕ್ಷರಾಗಿ ರೇಣುಕಮ್ಮ

ಜಗಳೂರು, ಜೂ.16- ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ‌ ನೂತನ ಅಧ್ಯಕ್ಷರಾಗಿ ಎಚ್.ರೇಣುಕಮ್ಮ ಗುರುಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಊರ್ಜಿತವಾದ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿ ತಾ.ಪಂ.ಪ್ರಭಾರಿ ಇಓ ಮಿಥುನ್ ಕಿಮಾವತ್  ಅವಿರೋಧ ಆಯ್ಕೆ  ಘೋಷಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ವಿರುಪಾಕ್ಷಪ್ಪ, ಮಾಜಿ ಅಧ್ಯಕ್ಷ ಶೇಖರಪ್ಪ ಗ್ರಾ.ಪಂ ಸದಸ್ಯರಾದ ಯಲ್ಲಮ್ಮ ಬಸವರಾಜ್, ಬಸವರಾಜ್, ರತ್ನಮ್ಮ ನಾರಪ್ಪ, ಜಿ.ಕೆ.ಶೇಖರಪ್ಪ, ದಿವ್ಯ ಸತೀಶ್, ಬಿ.ವಿ.ವೀರಪ್ಪ, ಎಂ.ಎಚ್.ರವೀಜಾ ತಾಜ್ ಪೀರ್, ರತ್ನಮ್ಮ ಗುರುಸ್ವಾಮಿ, ಕೆ.ಎಚ್.ನಾಗರಾಜ್, ಚಂದ್ರಮ್ಮ ಪ್ರಕಾಶ್, ಹೊನ್ನಮ್ಮ ನಾಗಪ್ಪ, ಗಾಯತ್ರಿ ಹನುಮಂತಪ್ಪ, ಶಿವಗಂಗಾ, ಮಂಜಕ್ಕ ಮುಂತಾದವರು ಇದ್ದರು. 

error: Content is protected !!