ಹರಿಹರ, ಜೂ.14- ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆಯನ್ನು ಖಂಡಿಸಿ, ನಗರದ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ನಟ ದರ್ಶನ್ ಪೋಸ್ಟರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ರಾಣಿ ಚೆನ್ನಮ್ಮ ವೃತ್ತದಿಂದ ಆರಂಭಗೊಂಡ ಕಾರ್ಯ ಕರ್ತರ ಪ್ರತಿಭಟನಾ ಮೆರವಣಿಗೆಯು ಮುಖ್ಯರಸ್ತೆ, ಗಾಂಧಿ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಶಶಿಧರಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ರಕ್ಷಣಾ ವೇದಿಕೆಯ ರಮೇಶ್ ಮಾನೆ, ಪ್ರೀತಂ ಬಾಬು ಮಾತನಾಡಿ, ಚಲನಚಿತ್ರ ನಟ ದರ್ಶನ್ ಸೇರಿದಂತೆ ಅವರ ಸ್ನೇಹಿತರು ರೇಣುಕಾ ಸ್ವಾಮಿಯ ವರನ್ನು ಕೊಲೆ ಮಾಡಿರುವುದು ಘೋರ ಅಪರಾಧ ವಾಗಿದೆ. ದರ್ಶನ್ ಸೇರಿದಂತೆ, ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಗಲ್ಲಿಗೇರಿಸಬೇಕು. ರೇಣುಕಾಸ್ವಾಮಿ ಪತ್ನಿ ಸಹನಾ ಅವರು ಹರಿಹರ ನಗರದವರಾಗಿದ್ದು, ಅವರಿಗೆ ಸರಿಯಾದ ನ್ಯಾಯವನ್ನು ಕೊಡಿಸಲು ಸರ್ಕಾರ ಮುಂ ದಾಗಬೇಕು ಮತ್ತು ಒಂದು ಕೋಟಿ ರೂಪಾಯಿ ಜೀವ ನಾಂಶವನ್ನು ಅವರಿಗೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ, ಸಮಾಳ ಚಂದ್ರಪ್ಪ, ಒಳಗಡ್ಡಿ ಚನ್ನಬಸಪ್ಪ, ಬಸವರಾಜಯ್ಯ, ರಮೇಶ್, ಅಲಿ ಅಕ್ಬರ್, ಜಗದೀಶ್, ರವಿಕುಮಾರ್, ಸುರೇಶ್ ಸ್ವಾಮಿ, ಹೆಚ್.ಎಂ. ವೀರಭದ್ರಯ್ಯ ಹಾಗೂ ಇತರರು ಹಾಜರಿದ್ದರು.