ದಾವಣಗೆರೆ, ಜೂ.13- ನಗರದ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ನ ಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಪರಿಸರ ಸ್ವಾಸ್ಥ್ಯವಾಗಿದ್ದರೆ ಎಲ್ಲರೂ ಆರೋಗ್ಯವಾಗಿರಬಹುದು. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಮನೆಯ ಮುಂದೆ ಗಿಡ ನೆಡಬೇಕು ಎಂದು ಟ್ರಸ್ಟಿನ ಗೌರವ ಕಾರ್ಯದರ್ಶಿ ಎಂ.ಬಿ ಸಂಗಮೇಶ್ವರ ಗೌಡರು ತಿಳಿಸಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಆದ್ದರಿಂದ ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತ ಮಾಡದೇ ವರ್ಷವಿಡಿ ಆಚರಿಸಿದಾಗ ಮಾತ್ರ ಪರಿಸರ ಅಭಿವೃದ್ಧಿಯಾಗುತ್ತದೆ ಎಂದು ಆಡಳಿತಾಧಿಕಾರಿ ಎಸ್.ಆರ್. ಶಿರಗಂಬಿ ತಿಳಿಸಿದರು. ಈ ವೇಳೆ ಶಾಲೆಯ ಮುಖ್ಯಸ್ಥೆ ಎ.ಎಸ್. ಕುಸುಮ, ಎಸ್. ಮಂಜುನಾಥ್ ಮತ್ತು ಶಾಲಾ ಸಿಬ್ಬಂದಿ ಇದ್ದರು.